image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

12ನೇ ವರ್ಷದ ದೀಪಾವಳಿ ಸಂಭ್ರಮಾಚರಣೆ: ಪೂರ್ವಭಾವಿ ಸಭೆ

12ನೇ ವರ್ಷದ ದೀಪಾವಳಿ ಸಂಭ್ರಮಾಚರಣೆ: ಪೂರ್ವಭಾವಿ ಸಭೆ

ಮಂಗಳೂರು : ಮಂಗಳೂರಿನಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಅವರ ನೇತೃತ್ವದಲ್ಲಿ 12ನೇ ವರ್ಷದ ಭಾವೈಕ್ಯತೆಯ ಸಂಗಮ ದೀಪಾವಳಿ ಸಂಭ್ರಮಾಚರಣೆಯ ಪೂರ್ವಭಾವಿ ಸಭೆ ಜರುಗಿತು. ಈ ಬಾರಿಯ ದೀಪಾವಳಿ ಕಾರ್ಯಕ್ರಮವು ಇದೇ ನವೆಂಬರ್ 8, 2026ರ ಭಾನುವಾರ ಮಂಗಳೂರಿನ ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದ ಸಭಾಂಗಣದಲ್ಲಿ ಮಧ್ಯಾಹ್ನದಿಂದ ರಾತ್ರಿಯವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅಂದು ಮಧ್ಯಾಹ್ನ 1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾಲಾ ವಿದ್ಯಾರ್ಥಿನಿಯರಿಗಾಗಿ ಚಿತ್ರಕಲಾ ಸ್ಪರ್ಧೆ, ಭರತನಾಟ್ಯ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಸಂಚಾಲಕರಾದ ಪ್ರದೀಪ್ ಬೇಕಲ್, ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಜೇಮ್ಸ್ ಪ್ರವೀಣ್, ನೀತು ಡಿʼಸೋಜಾ, ಕುಮಾರಿ ಪ್ರಗತಿ ಬೇಕಲ್, ಅಲ್ಟ್ಸೈನ್ ಡಿಕುನ್ಹ, ಅಶ್ರಫ್ ಬೆಂಗ್ರೆ, ಮೇರಿ ಡಿʼಸೋಜಾ, ಲಿಡಿಯಾ ಡಿʼಸೋಜಾ, ಡೆನ್ನಿಸ್ ಪಾಯಸ್ ಮುಂಬೈ, ಮನೀಶ್ ಬೋಳಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ