image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿಂದ ಎರ್ನಾಕುಲಂ, ತಿರುಪತಿ, ಹೈದರಾಬಾದ್‌ಗೆ ಕೆಎಸ್‌ಆರ್‌ಟಿಸಿ ಹೊಸ ಬಸ್ ಸೇವೆ ಆರಂಭ

ಮಂಗಳೂರಿಂದ ಎರ್ನಾಕುಲಂ, ತಿರುಪತಿ, ಹೈದರಾಬಾದ್‌ಗೆ ಕೆಎಸ್‌ಆರ್‌ಟಿಸಿ ಹೊಸ ಬಸ್ ಸೇವೆ ಆರಂಭ

ಮಂಗಳೂರು : ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗದಿಂದ ಹೊಸ ಬಸ್ ಸೇವೆಗಳನ್ನು ಅಕ್ಟೋಬರ್ 12 ರಿಂದ ಪ್ರಾರಂಭಿಸಿದೆ.

ಮಂಗಳೂರು-ಎರ್ನಾಕುಲಂ ಮಾರ್ಗದಲ್ಲಿ 'ವೋಲ್ವೋ ಮಲ್ಟಿ ಆಕ್ಸಿಲ್' ಬಸ್ ಹಾಗೂ ಮಂಗಳೂರು-ತಿರುಪತಿ ಮತ್ತು ಮಂಗಳೂರು-ಹೈದರಾಬಾದ್ ಮಾರ್ಗಗಳಲ್ಲಿ ಹೊಸದಾಗಿ 'ಪಲ್ಲಕ್ಕಿ ನಾನ್ ಎಸಿ ಸ್ಲೀಪರ್' ಬಸ್‌ಗಳ ಸಂಚಾರ ಆರಂಭಗೊಂಡಿದೆ. ಪ್ರಯಾಣಿಕರು ksrtc.in ಅಧಿಕೃತ ಜಾಲತಾಣದ ಮೂಲಕ ಮುಂಗಡ ಬುಕ್ಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ