image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದಿಂದ ಸರ್ಕಾರದ ಮುಂದೆ ವಿವಿಧ ಮೂಲಭೂತ ಬೇಡಿಕೆಗಳು

ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದಿಂದ ಸರ್ಕಾರದ ಮುಂದೆ ವಿವಿಧ ಮೂಲಭೂತ ಬೇಡಿಕೆಗಳು

ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತವು ಸಾರ್ವಜನಿಕ ಮತ್ತು ಹಿರಿಯ ನಾಗರಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ವಿವಿಧ ಪ್ರಮುಖ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ.

ಮಂಗಳೂರಿನ ನಂದಿಗುಡ್ಡ ಸ್ಮಶಾನದಲ್ಲಿ ಅತ್ಯಗತ್ಯವಾಗಿರುವ ವಿದ್ಯುತ್ ಶವಗಾರ ನಿರ್ಮಾಣ, ಮಂಗಳಾದೇವಿ, ಮೋರ್ಗಾನ್ಸ್‌ಗೇಟ್, ಕಂಕನಾಡಿ, ಎ.ಜೆ. ಆಸ್ಪತ್ರೆ, ದೇರೆಬೈಲ್, ಪಡೀಲ್ ಹಾಗೂ ಜಲ್ಲಿಗುಡ್ಡೆ ಮಾರ್ಗಗಳಲ್ಲಿ ಹೊಸ ಬಸ್ ಸೌಲಭ್ಯಗಳನ್ನು ಒದಗಿಸುವುದು ಸೇರಿ ಹಲವು ಬೇಡಿಕೆಗಳನ್ನು ಸಹಕಾರಿ ಸಂಘವು ಸರ್ಕಾರದ ಮುಂದಿಟ್ಟಿದೆ. ಅಲ್ಲದೆ, ಸಾರ್ವಜನಿಕರಿಗಾಗಿ ಬಸ್ ತಂಗುದಾಣ, ಸುಲಭ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಪಾಸ್‌ಪೋರ್ಟ್ ಆಫೀಸ್‌ಗೆ ಗಾಳಿ-ಮಳೆ-ಬಿಸಿಲಿನಿಂದ ರಕ್ಷಣೆ ನೀಡುವ ಸುಸಜ್ಜಿತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಇದರೊಂದಿಗೆ, 70 ವರ್ಷ ಮೇಲ್ಪಟ್ಟ ಯಾವುದೇ ಮಾಸಾಶನ ಹೊಂದಿಲ್ಲದ ಹಿರಿಯ ನಾಗರಿಕರಿಗೆ ತಿಂಗಳಿಗೆ ₹5,000 ಗೌರವಧನದ ಪಿಂಚಣಿ ಹಾಗೂ ಉಚಿತ ವೈದ್ಯಕೀಯ ನೆರವು ನೀಡುವ ಹೊಸ ಯೋಜನೆಯನ್ನು ಜಾರಿಗೆ ತರಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ. ಜಿಲ್ಲೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಗುರುತನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ "ದಕ್ಷಿಣ ಕನ್ನಡ ಜಿಲ್ಲೆ" ಎಂಬುದನ್ನು "ಮಂಗಳೂರು ಜಿಲ್ಲೆ" ಎಂದು ಪುನರ್ ನಾಮಕರಣ ಮಾಡಬೇಕೆಂದು ಸಹಕಾರಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಈ ಪತ್ರಿಕಾ ಪ್ರಕಟಣೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ಕೆ. ಭಾಸ್ಕರ್ ರಾವ್ (ಮಾಜಿ ಕಾರ್ಪೊರೇಟರ್) ಹಾಗೂ ನ ನಾಗೇಂದ್ರ ಕುಮಾರ್, ಸತೀಶ್ ಪಂಗಾಲ್, ಅಲನ್ಸಿನ್ ಡಿಕೂನ್ಹಾ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ