image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವಕೊಂಕಣಿ ಕೇಂದ್ರದಲ್ಲಿ “ಬಾಲರಂಗ” 3 ದಿನಗಳ ನಾಟಕ ತರಬೇತಿ ಶಿಬಿರ ಉದ್ಘಾಟನೆ

ವಿಶ್ವಕೊಂಕಣಿ ಕೇಂದ್ರದಲ್ಲಿ “ಬಾಲರಂಗ” 3 ದಿನಗಳ ನಾಟಕ ತರಬೇತಿ ಶಿಬಿರ ಉದ್ಘಾಟನೆ

ಮಂಗಳೂರು : ಮಂಗಳೂರಿನ ವಿಶ್ವಕೊಂಕಣಿ ಕೇಂದ್ರದಲ್ಲಿ ‘ವರ್ಧನಿ’ ಪ್ರಾಯೋಜಕತ್ವ ಹಾಗೂ ಸಾಧನಾ ಬಳಗದ ಸಹಕಾರದೊಂದಿಗೆ ಆಯೋಜಿಸಲಾದ ಮಕ್ಕಳ 3 ದಿನಗಳ ಉಚಿತ “ಬಾಲರಂಗ” ನಾಟಕ ತರಬೇತಿ ಶಿಬಿರವು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟನೆಗೊಂಡಿತು. ಮಂಗಳೂರು ಎಂ.ಆರ್.ಪಿ.ಎಲ್.ನ ನಿವೃತ್ತ ಅಧಿಕಾರಿ ಡಾ. ನರೇಶ್ ರಾಮದಾಸ ಕಿಣಿ ಅವರು ಈ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಡಾ. ನರೇಶ್ ರಾಮದಾಸ ಕಿಣಿ, ಸಂಗೀತ, ನಾಟಕ, ನೃತ್ಯ, ರಂಗ ಪರಿಕರ ತಯಾರಿ, ಮುಖವಾಡ ತಯಾರಿ ಮತ್ತು ರಂಗ ಸಂಗೀತದಂತಹ ವಿವಿಧ ಕೌಶಲ್ಯಗಳ ಅಭ್ಯಾಸವು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಪರೋಕ್ಷವಾಗಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಇಂತಹ ತರಬೇತಿ ನೀಡುವ ಕಾರ್ಯ ವಿಶ್ವ ಕೊಂಕಣಿ ಕೇಂದ್ರವು ಕೈಗೆತ್ತಿಕೊಂಡಿರುವುದು ತುಂಬಾ ಉಪಯುಕ್ತವಾಗಿದೆ ಎಂದು ತಿಳಿಸಿದರು.

ಸಾಧನಾ ಬಳಗದ ಮುಖ್ಯಸ್ಥ ಶ್ರೀ ಪ್ರಕಾಶ ಶೆಣೈ ಶಿಬಿರದ ಸಂಕ್ಷಿಪ್ತ ವಿವರ ನೀಡಿ, ಮೂರು ದಿನಗಳ ಈ ಸನಿವಾಸ ವಿಶೇಷ ಶಿಬಿರದಲ್ಲಿ ಸುಮಾರು 50 ಮಕ್ಕಳು ಉಚಿತ ಊಟೋಪಚಾರ ಹಾಗೂ ವಸತಿ ಸೌಲಭ್ಯದೊಂದಿಗೆ ನಾಟಕದ ವಿವಿಧ ಕಲೆಗಳ ತರಬೇತಿ ಪಡೆಯಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶ್ವಕೊಂಕಣಿ ಕೇಂದ್ರದ ಕೋಶಾಧಿಕಾರಿ ಶ್ರೀ ಬಿ.ಆರ್. ಭಟ್ ಸ್ವಾಗತಿಸಿದರು. ಕೇಂದ್ರದ ಉಪಾಧ್ಯಕ್ಷರಾದ ಶ್ರೀ ವಿಲಿಯಂ ಡಿಸೋಜಾ, ಶ್ರೀ ಡಿ. ರಮೇಶ್ ನಾಯಕ್, ಹೆಸರಾಂತ ನಾಟಕ ತರಬೇತುದಾರ ಜಗನ್ ಪವಾರ, ಸತೀಶ ಪಿ ನೀನಾಸಂ, ಅರುಣ್ ಪ್ರಕಾಶ ನಾಯಕ, ಅಶೋಕ ಕಾಮತ್, ಪುಷ್ಪಲತಾ ಭಟ್ ಹಾಗೂ ಪ್ರಾಯೋಜಕಿ ಶ್ರೀಮತಿ ಉಷಾ ನಂದಗೋಪಾಲ ಶೆಣೈ ಉಪಸ್ಥಿತರಿದ್ದರು. ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಧನ್ಯವಾದ ಸಮರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ