ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ನಿರಂತರ ಜನಸೇವೆಯ 'ಸೇವಾ ಸಂಕಲ್ಪ ಅಭಿಯಾನ'ದ ಭಾಗವಾಗಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದಲ್ಲಿ ವಿಕಸಿತ ಭಾರತ ಕಲ್ಪನೆಯಡಿ ಬೃಹದಾಕಾರವಾಗಿ ರಚಿಸಲಾದ ವಿಶಿಷ್ಟ "ರಾಷ್ಟ್ರದೊಂದಿಗೆ ರಂಗೋಲಿ" ಕಾರ್ಯಕ್ರಮವು ನಗರದ ಕುದ್ರೋಳಿ ಭಗವತಿ ದೇವಸ್ಥಾನದ ಕೂಟಕ್ಕಳ ಸಭಾಭವನದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನುು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, "ಇದು ಕೇವಲ ಕಲಾತ್ಮಕ ರಂಗೋಲಿಯಲ್ಲ; ಬದಲಿಗೆ 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಕನಸಿಗನುಗುಣವಾದ ವಿಶಿಷ್ಟ ರಾಷ್ಟ್ರಪ್ರೇಮದ ರಂಗೋಲಿಯಾಗಿದೆ" ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ, "ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಇಂದು ಹಿಂದೆಂದೂ ಕಾಣದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಜನಪರ ಕಾರ್ಯಗಳು ಹಾಗೂ ಸಾಧನೆಗಳನ್ನು ತಲುಪಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ" ಎಂದು ತಿಳಿಸಿದರು.
ಈ ವಿನೂತನ ಕಾರ್ಯಕ್ರಮದಲ್ಲಿ ಕಲಾತ್ಮಕವಾಗಿ ರಂಗೋಲಿಯನ್ನು ಬಿಡಿಸಿ ಗಮನ ಸೆಳೆದ ಕಲಾವಿದರಾದ ಶ್ರೀ ಸತೀಶ್ಚಂದ್ರ ಹಾಗೂ ಶ್ರೀಮತಿ ವೀಣಾ ಐತಾಳ್ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು.
ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಸುಜೀತ್ ಪ್ರತಾಪ್, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಂದನ್ ಮಲ್ಯ, ಮಂಜುಳಾ ರಾವ್, ವಸಂತ ಪೂಜಾರಿ, ಸಂಧ್ಯಾ ವೆಂಕಟೇಶ್, ವಿಜಯ ಕುಮಾರ್ ಶೆಟ್ಟಿ, ದೀಪಕ್ ಪೈ, ಗೌತಮ್ ಕೋಡಿಕಲ್, ಜಯ ಕುಮಾರ್, ಅಮಿತ್ ರಾಜ್, ಶಬರೀಶ್, ಮೋಹನ್ ಪೂಜಾರಿ, ರವಿಚಂದ್ರ, ಪ್ರವೀಣ್ ನಿಡ್ಡೆಲ್, ಉದಯ್ ಡಿಸೋಜಾ, ಪ್ರಶಾಂತ್ ಮರೋಳಿ, ಪೂರ್ಣಿಮ ರಾವ್, ಲೀಲಾವತಿ ಪ್ರಕಾಶ್, ಚಂದ್ರಾವತಿ ವಿಶ್ವನಾಥ್, ಗಣೇಶ್ ಕುಲಾಲ್, ಶೋಭಾ ಪೂಜಾರಿ ಹಾಗೂ ವೀಣಾ ಮಂಗಳ ಸೇರಿದಂತೆ ಹLವಾರು ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.