image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಡಿಕೇರಿ ದಸರಾ: ಮಂಗಳೂರು ಕೆಎಸ್‌ಆರ್‌ಟಿಸಿಯಿಂದ ಕೊಡಗು ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಟೂರ್

ಮಡಿಕೇರಿ ದಸರಾ: ಮಂಗಳೂರು ಕೆಎಸ್‌ಆರ್‌ಟಿಸಿಯಿಂದ ಕೊಡಗು ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಟೂರ್

ಮಂಗಳೂರು : ಮಡಿಕೇರಿ ದಸರಾ ಮಹೋತ್ಸವದ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗವು ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಸೇವೆಯನ್ನು ಘೋಷಿಸಿದೆ. ಅಕ್ಟೋಬರ್ 11 ರಿಂದ 26 ರವರೆಗೆ ಈ ವಿಶೇಷ ಬಸ್ ಸೌಲಭ್ಯ ಲಭ್ಯವಿರಲಿದೆ.

ಈ ಪ್ರವಾಸದಲ್ಲಿ ‘ಕಾವೇರಿ ದರ್ಶನ’ ಹಾಗೂ ‘ಕೊಡಗಿನ ಸೊಬಗು’ ಎಂಬ ಎರಡು ಪ್ರತ್ಯೇಕ ಮಾರ್ಗಗಳನ್ನು ರೂಪಿಸಲಾಗಿದೆ. ‘ಕಾವೇರಿ ದರ್ಶನ’ ಪ್ಯಾಕೇಜ್‌ನಲ್ಲಿ ಓಂಕಾರೇಶ್ವರ ದೇವಸ್ಥಾನ, ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಅಬ್ಬಿ ಜಲಪಾತ ಹಾಗೂ ರಾಜಾ ಸೀಟ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ‘ಕೊಡಗಿನ ಸೊಬಗು’ ಪ್ಯಾಕೇಜ್‌ನಲ್ಲಿ ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ ಅಥವಾ ಆನೆ ಕ್ಯಾಂಪ್, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ತೋಟ, ಅಬ್ಬಿ ಜಲಪಾತ ಮತ್ತು ರಾಜಾ ಸೀಟ್ ತಾಣಗಳನ್ನು ಸೇರಿಸಲಾಗಿದೆ.

ಈ ಎರಡೂ ಪ್ಯಾಕೇಜ್‌ಗಳ ಬಸ್‌ಗಳು ಪ್ರತಿದಿನ ಬೆಳಿಗ್ಗೆ 6:30 ಗಂಟೆಗೆ ಮಡಿಕೇರಿ ಬಸ್ಸು ನಿಲ್ದಾಣದಿಂದ ಹೊರಟು, ಪ್ರವಾಸಿ ತಾಣಗಳನ್ನು ಸುತ್ತಿ ರಾತ್ರಿ 7:30 ಗಂಟೆಗೆ ಮಡಿಕೇರಿ ಬಸ್ಸು ನಿಲ್ದಾಣಕ್ಕೆ ಹಿಂತಿರುಗಲಿವೆ. ಈ ಪ್ರವಾಸಕ್ಕೆ ‘ಕರ್ನಾಟಕ ಸಾರಿಗೆ’ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣ ದರವನ್ನು ವಯಸ್ಕರಿಗೆ ₹400 ಹಾಗೂ ಮಕ್ಕಳಿಗೆ ₹300 ನಿಗದಿಪಡಿಸಲಾಗಿದೆ (ಊಟೋಪಚಾರ ಮತ್ತು ಪ್ರವೇಶ ಶುಲ್ಕ ಪ್ರತ್ಯೇಕ).

ಸಾರ್ವಜನಿಕರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಸ್ಥೆಯ ಅಧಿಕೃತ ವೆಬ್‌ಸೈಟ್ (www.ksrtc.in) ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಸಾರ್ವಜನಿಕರು ಈ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ವಿನಂತಿಸಿದ್ದಾರೆ.

Category
ಕರಾವಳಿ ತರಂಗಿಣಿ