image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಅಕ್ಟೋಬರ್ 11ರಂದು 'ಬ್ಲೂಮಿಂಗ್ ಫೆದರ್ಸ್' ಚಿತ್ರಕಲಾ ಪ್ರದರ್ಶನ

ಮಂಗಳೂರಿನಲ್ಲಿ ಅಕ್ಟೋಬರ್ 11ರಂದು 'ಬ್ಲೂಮಿಂಗ್ ಫೆದರ್ಸ್' ಚಿತ್ರಕಲಾ ಪ್ರದರ್ಶನ

ಮಂಗಳೂರು: ನಗರದ ವೆಲೆನ್ಸಿಯಾದಲ್ಲಿರುವ 'ವರ್ಣ ಸ್ಕೂಲ್ ಆಫ್ ಆರ್ಟ್ಸ್' ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ 'ಬ್ಲೂಮಿಂಗ್ ಫೆದರ್ಸ್' ಎಂಬ ವಿಶೇಷ ಚಿತ್ರಕಲಾ ಪ್ರದರ್ಶನವನ್ನು 2026ರ ಅಕ್ಟೋಬರ್ 11ರಂದು ಆಯೋಜಿಸಲಾಗಿದೆ.

ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಅಪರಾಹ್ನ 3:00 ಗಂಟೆಗೆ ಪ್ರಾರಂಭವಾಗಲಿದೆ. ಪ್ರದರ್ಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸ್ವತಃ ರಚಿಸಿರುವ ವಿವಿಧ ಹಾಗೂ ವಿಭಿನ್ನ ಮಾದರಿಯ ಅಪರೂಪದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ಕಲಾಪ್ರೇಮಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳ ಈ ಕಲಾ ಪ್ರತಿಭೆಯನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯು ವಿನಂತಿಸಿದೆ.

Category
ಕರಾವಳಿ ತರಂಗಿಣಿ