ಮಂಗಳೂರು : ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ (MMSA) ಹಾಗೂ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (IMSC) ಜಂಟಿಯಾಗಿ ನಗರದ 'ಗೋಲ್ಡ್ ಫಿಂಚ್ ಸಿಟಿ' ಮೈದಾನದಲ್ಲಿ 'ಭಾರತ್ ಪೆಟ್ರೋಲಿಯಂ ಆಟೋಕ್ರಾಸ್' ಚಾಂಪಿಯನ್‌ಷಿಪ್ ಅನ್ನು ಆಯೋಜಿಸಿಲಾಗಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸುದೀಪ್ ಬಿ.ಕೆ. ತಿಳಿಸಿದರು.
ಚಿಕ್ಕಮಗಳೂರು, ಕೂರ್ಗ್, ಮೈಸೂರು, ಬೆಂಗಳೂರು, ಮುಲ್ಕಿ, ಮೂಡುಬಿದಿರೆ, ಕಾರ್ಕಳ, ಶಿವಮೊಗ್ಗ ಹಾಗೂ ಗೋವಾದಿಂದ ಚಾಲಕರು ಆಸಕ್ತಿ ತೋರಿಸಿದ್ದು, ಸುಮಾರು 100 ರಿಂದ 175ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಗೆ 1.1 ಕಿಲೋಮೀಟರ್ ಉದ್ದದ ಕಠಿಣ ಹಾಗೂ ಸುರಕ್ಷಿತ ಟ್ರ್ಯಾಕ್ ಅನ್ನು ಸಿದ್ಧಪಡಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡುವ ಮಹಿಳಾ ಸ್ಪರ್ಧಿಗೆ 'ವಿಶೇಷ ಮಹಿಳಾ ಟ್ರೋಫಿ' (Special Ladies Trophy) ನೀಡಲಾಗುತ್ತಿದ್ದು, ಸಾರ್ವಜನಿಕರಿಗೆ ಮತ್ತು ವೀಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡುವ ಬದಲು ಯುವಜನರು ಇಂತಹ ನಿಯಂತ್ರಿತ ಮತ್ತು ಸುರಕ್ಷಿತ ವೇದಿಕೆಗಳಲ್ಲಿ ತಮ್ಮ ಚಾಲನಾ ಕೌಶಲ್ಯವನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಸಚಿವ ಯು.ಟಿ. ಖಾದರ್ ಹಾಗೂ ಸ್ಥಳೀಯ ಶಾಸಕರು ಮತ್ತು ಸಂಸದ ಬ್ರಿಜೇಶ್ ಚೌಟ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಶ್ವಿನ್ ನಾಯಕ್ - ಕಾರ್ಯದರ್ಶಿ, ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (IMSC) ಹಾಗೂ FIM SRI ಕಮಿಷನರ್, ವಿಕ್ರಮ್ ಗೌಡ - ದ್ವಿಪದ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್, ಹರೀಶ್ ಸುವರ್ಣ - ಕಾರ್ಯದರ್ಶಿ, ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ (MMSA) ಉಪಸ್ಥಿತರಿದ್ದರು