ಉಜಿರೆ: ಧರ್ಮಸ್ಥಳದಲ್ಲಿ ಇದೇ ಅಕ್ಟೋಬರ್ 11 ರಿಂದ 19 ರವರೆಗೆ ನವರಾತ್ರಿ ಪ್ರಯುಕ್ತ ವಿವಿಧ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನವರಾತ್ರಿಯ ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ಸಂಜೆ 6:00 ರಿಂದ 9:00 ರವರೆಗೆ ನಾಡಿನ ಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 11 (ಭಾನುವಾರ): ಧರ್ಮಸ್ಥಳದ ಕುಮಾರಿ ಪ್ರಾಪ್ತಿ ಶೆಟ್ಟಿ ಹಾಗೂ ನಿಡಿಗಲ್‌ನ ಕುಮಾರಿ ಆದ್ವಿ ಅವರಿಂದ ಭಕ್ತಿ ಸಂಗೀತ ನಡೆಯಲಿದೆ.
ಅಕ್ಟೋಬರ್ 12 (ಸೋಮವಾರ): ಮಂಗಳೂರಿನ ಪವಿತ್ರಾ ವಿನಯ್ ಮಯ್ಯ ಅರ್ಕುಳ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ.
ಅಕ್ಟೋಬರ್ 13 (ಮಂಗಳವಾರ): ಮೈಸೂರಿನ ಕುಮಾರಿ ಮಾನ್ಸಿ ಅವರಿಂದ ಭಕ್ತಿ ಸಂಗೀತ ಗಾಯನ ನಡೆಯಲಿದೆ.
ಅಕ್ಟೋಬರ್ 14 (ಬುಧವಾರ): ಮಂಗಳೂರು ಪೆರ್ಲದ ಮಾಸ್ಟರ್ ಆಗಮ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಲಿದೆ.
ಅಕ್ಟೋಬರ್ 15 (ಗುರುವಾರ): ಬೆಂಗಳೂರಿನ ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಹಾಗೂ ಮಾಸ್ಟರ್ ಅಸ್ರಮೇಯ ಗುರುಪ್ರಸಾದ್ ಅವರಿಂದ ನೃತ್ಯ ಮತ್ತು ಗಾನಲಹರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಕ್ಟೋಬರ್ 16 (ಶುಕ್ರವಾರ): ಬೆಂಗಳೂರಿನ ಸನತ್‌ಕುಮಾರ್ ಅವರಿಂದ ವಯಲಿನ್ ವಾದನ ನಡೆಯಲಿದೆ.
ಅಕ್ಟೋಬರ್ 17 (ಶನಿವಾರ): ಬಂಟ್ವಾಳದ ಕುಮಾರಿ ಮಯೂರಿ ಭಟ್ ಪೊಳಲಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರುಗಲಿದೆ.
ಅಕ್ಟೋಬರ್ 18 (ಭಾನುವಾರ): ಕುಂದಾಪುರದ ಕುಮಾರಿ ಐಶ್ವರ್ಯ ಜೋಗಿ ಮತ್ತು ತಂಡದವರಿಂದ ಸುಮಧುರ ಗಾನವೈಭವ ನಡೆಯಲಿದೆ.
ಅಕ್ಟೋಬರ್ 19 (ಸೋಮವಾರ): ಬೆಂಗಳೂರಿನ ಕುಮಾರಿ ಅರ್ಚಿಷಾ ರಾವ್ ಮತ್ತು ಬಳಗದಿಂದ ಸಂಜೆ 6:30 ರಿಂದ 8:30 ರವರೆಗೆ ಹಾಗೂ ಪೊಳಲಿಯ ಮಲ್ಲಿಕಾಮಟ್ಟಿ ಮತ್ತು ಬಳಗದಿಂದ ರಾತ್ರಿ 9:00 ರಿಂದ 11:30 ರವರೆಗೆ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.