image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯಕ್ಷಧ್ರುವ ಪಟ್ಲ ಫೌಂಡೇಶನ್: ಅಧ್ಯಕ್ಷರಾಗಿ ಪೂರ್ಣಿಮಾ ಯತೀಶ್ ರೈ ಪುನರಾಯ್ಕೆ

ಯಕ್ಷಧ್ರುವ ಪಟ್ಲ ಫೌಂಡೇಶನ್: ಅಧ್ಯಕ್ಷರಾಗಿ ಪೂರ್ಣಿಮಾ ಯತೀಶ್ ರೈ ಪುನರಾಯ್ಕೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕೇಂದ್ರೀಯ ಮಹಿಳಾ ಘಟಕದ ಅಧ್ಯಕ್ಷರಾಗಿ ಪೂರ್ಣಿಮಾ ಯತೀಶ್ ರೈ ಅವರು ಪುನರಾಯ್ಕೆಯಾಗಿದ್ದಾರೆ. ಸುರತ್ಕಲ್ಲಿನ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕೇಂದ್ರೀಯ ಮಹಿಳಾ ಘಟಕದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು.

ಸಭೆಯಲ್ಲಿ ಕಳೆದ ವರ್ಷದ ಕಾರ್ಯಕ್ರಮಗಳ ಲೆಕ್ಕಪತ್ರ ಮಂಡನೆಯ ಬಳಿಕ, ಮಹಿಳಾ ಘಟಕದ ಮುಂಬರುವ 'ದಶಮ ಸಂಭ್ರಮ'ದ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಆರತಿ ರಾಮಚಂದ್ರ ಆಳ್ವ, ಸಂಚಾಲಕರಾಗಿ ಸಹನಾ ರಾಜೇಶ್ ರೈ ಹಾಗೂ ಸಹ ಸಂಚಾಲಕರಾಗಿ ಸುಜಾತಾ ಲೀಲಾಧರ್ ಶೆಟ್ಟಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಕೇಸರಿ ಎಸ್. ಪೂಂಜಾ ಮತ್ತು ವೇದಾವತಿ ಎನ್. ಶೆಟ್ಟಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಪ್ರಶಾಂತ್ ಶಾಸ್ತ್ರೀ, ಕೋಶಾಧಿಕಾರಿಯಾಗಿ ಭಾರತಿ ಸಂಜಯ್ ರಾವ್ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಸಾಯಿಸುಮ ಎಮ್. ನಾವಡ ಮತ್ತು ನಿರ್ಮಲಾ ಆರಿಗ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ರೇವತಿ ನವೀನ್, ವಸುಂದರಾ ಹರೀಶ್, ಪಾರ್ವತಿ ಅಮೀನ್, ಸುಜಾತಾ ಲೋಲಾಕ್ಷ ಆಚಾರ್ಯ, ಚಂದ್ರಕಲಾ ಎಸ್. ಶೆಟ್ಟಿ ಪಕ್ಷಿಕೆರೆ, ವತ್ಸಲಾ ಮಲ್ಲಿ ಮತ್ತು ಸುಜ್ಯೋತಿ ರಾವ್ ನೇಮಕಗೊಂಡಿದ್ದಾರೆ.

ಗೌರವ ಸಲಹೆಗಾರರಾಗಿ ಶಕುಂತಲಾ ರಮಾನಂದ ಭಟ್ ಇಡ್ಯಾ, ಸಂಧ್ಯಾ ಐತಾಳ್, ಚಂದ್ರಕಲಾ ಬಿ. ಶೆಟ್ಟಿ, ಅನಿತಾ ಪಿಂಟೋ, ಸುಲತಾ ಶೆಟ್ಟಿ, ಸುಮಂಗಲಾ ರತ್ನಾಕರ್ ಹಾಗೂ ನಿವೇದಿತಾ ಎನ್. ಶೆಟ್ಟಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪೂರ್ಣಿಮಾ ಶಾಸ್ತ್ರೀ ಕಾರ್ಯಕ್ರಮ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Category
ಕರಾವಳಿ ತರಂಗಿಣಿ