ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಟಾಕಿ ಮಾರಾಟಗಾರರ ಸಂಘ ಮಂಗಳೂರು ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಹಸಿರು ಪಟಾಕಿ ಮಾರಾಟ ಕೇಂದ್ರಗಳನ್ನು ಈ ಬಾರಿ ತೆರೆಯಲಾಗುವುದು ಎಂದು ಸಂಘಟನೆಯ ಅಧ್ಯಕ್ಷರಾದ ಆಲ್ವಿನ್ ಪಿಂಟೋ ನಗರದ ಖಾಸಗಿ ಹೊಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ತಾತ್ಕಾಲಿಕ ಪಟಾಕಿ ಮಾರುವವರು ತುಂಬಾ ಸಂಕಷ್ಟದಲ್ಲಿದ್ದು, ಈ ಸಲದ ಪಟಾಕಿ ಮಾರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಘದ ಮನವಿಗೆ ಸೂಕ್ತವಾಗಿ ಸ್ಪಂಧಿಸಿ 13 ಮೈದಾನಗಳನ್ನು ಗುರುತಿಸಿದ್ದಾರೆ.
ಅದರಲ್ಲಿ (1) ನೆಹರೂ ಮೈದಾನ, (2) ಎ.ಪಿ.ಎಮ್.ಸಿ ಬೈಕಂಪಾಡಿ, (3) ಉರ್ವ ಕ್ರಿಕೆಟ್ ಮೈದಾನ, (4) ಕೃಷ್ಣಾಪುರ ಪ್ಯಾರಡೈಸ್ ಮೈದಾನ, (5) ಕದ್ರಿ ಕ್ರಿಕೆಟ್ ಮೈದಾನ, (6) ಅತ್ತಾವರ ನಾಯಕ್ ಮೈದಾನ, (7) ಪದವು ಹೈಸ್ಕೂಲ್ ಮೈದಾನ, (8) ಬೋಂದೆಲ್ ಕ್ರಿಕೆಟ್ ಮೈದಾನ, (9) ಪಂಪುವೆಲ್ ಬಸ್ ಸ್ಟಾಂಡಿಗೆ ನಿಗದಿಪಡಿಸಿದ ಜಾಗ, (10) ಶಕ್ತಿನಗರ ಮೈದಾನ, (11) ಪಚ್ಚನಾಡಿ ಮೈದಾನ, (12) ಎಮ್ಮೆಕೆರೆ ಮೈದಾನ (13), ಆದರ್ಶ ಯುವಕ ಮಂಡಲ ಮೈದಾನ ಗಣೇಶಪುರ ಎಂಬ ಈ ಮೇಲಿನ ಎಲ್ಲಾ ಮೈದಾನಗಳಲ್ಲಿ ಈ ಸಲ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಿದ್ದು, ಈ ಎಲ್ಲಾ ಮೈದಾನಗಳಲ್ಲಿ ಪಟಾಕಿ ಸ್ಟಾಲುಗಳಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂಘಟನೆಯ ನೇತೃತ್ವದ ಪಟಾಕಿ ಮಾರಾಟಗಾರರನ್ನು ಬೆಂಬಲಿಸಬೇಕಾಗಿ ವಿನಂತಿಸಿದ್ದಾರೆ.
ಕಳೆದ ವರ್ಷದಲ್ಲಿ ನಡೆದ ಕೆಲವು ಗೊಂದಲಗಳಿಗೆ ತೆರೆ ಎಳೆದು ಈ ಬಾರಿ ಸಂಘಟನೆಯ ಕರೆಗೆ ಸೂಕ್ತವಾಗಿ ಸ್ಪಂದಿಸಿದ ದ.ಕ. ಜಿಲ್ಲಾಧಿಕಾರಿಯವರಿಗೆ, ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಸಿಬಂದಿ ವರ್ಗಕ್ಕೆ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಸಿಬಂದಿ ವರ್ಗಕ್ಕೆ, ಪೊಲೀಸ್ ಕಮೀಷನರ್ ಮತ್ತು ಸಿಬಂದಿ ವರ್ಗಕ್ಕೆ, ಶಾಸಕರಾದ ವೇದವ್ಯಾಸ ಕಾಮತ್, ಡಾ॥ ಭರತ್ ಶೆಟ್ಟಿ ವೈ. ಸ್ಪೀಕರ್ ಯು.ಟಿ. ಖಾದರ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ, ತುಂಬಾ ತಾಳ್ಮೆಯಿಂದ ಕಾದ ಸಂಘದ ಸದಸ್ಯರಿಗೂ ಧನ್ಯವಾದಗಳನ್ನು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಮಧುಸೂದನ ಉರ್ವಸ್ಟೋರ್, ಕಾರ್ಯದರ್ಶಿಗಳಾದ ಪ್ರಕಾಶ್ ಎಂ, ರಾಘವೇಂದ್ರ ಉಪಸ್ಥಿತರಿದ್ದರು.