image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಟಾಕಿ ಸ್ಫೋಟದಿಂದ ಗಾಯಗೊಂಡಿದ್ದ ಬಾಲಕ ಗೌತಮ್ ಪೂಜಾರಿಗೆ ಸಿಎಂ ಪರಿಹಾರ ನಿಧಿಯಿಂದ ರೂ. 1 ಲಕ್ಷ ನೆರವು ಮಂಜೂರು

ಪಟಾಕಿ ಸ್ಫೋಟದಿಂದ ಗಾಯಗೊಂಡಿದ್ದ ಬಾಲಕ ಗೌತಮ್ ಪೂಜಾರಿಗೆ ಸಿಎಂ ಪರಿಹಾರ ನಿಧಿಯಿಂದ ರೂ. 1 ಲಕ್ಷ ನೆರವು ಮಂಜೂರು

ಪುತ್ತೂರು: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಅಜ್ಞಾತ ಪಟಾಕಿಯನ್ನು ಮನೆಗೆ ತಂದು, ಅದು ಏನು ಎಂದು ತಿಳಿಯದೆ ಬೆಂಕಿ ಕೊಡಲು ಯತ್ನಿಸಿದಾಗ ಆಕಸ್ಮಿಕವಾಗಿ ಸ್ಫೋಟಗೊಂಡು ಗಂಭೀರ ಗಾಯಗೊಂಡು ಕೈಯ ಬೆರಳುಗಳನ್ನು ಕಳೆದುಕೊಂಡಿದ್ದ ಬಾಲಕನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿಗಳ ಆರ್ಥಿಕ ಪರಿಹಾರ ಒದಗಿಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮಾಣಿಲ ಗ್ರಾಮದ ಗುತ್ತಿನ ಬೈಲು ನಿವಾಸಿ ಗೌತಮ್ ಪೂಜಾರಿ ಎಂಬ ಬಾಲಕನು ಎಂದಿನಂತೆ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ದಾರಿಯಲ್ಲಿ ಪಟಾಕಿಯೊಂದು ಬಿದ್ದುಕೊಂಡಿರುವುದು ಕಂಡಿದೆ. ಅದು ಏನೆಂಬ ಅರಿವಿಲ್ಲದೆ ಆ ಬಾಲಕ ಅದನ್ನು ತೆಗೆದುಕೊಂಡು ಮನೆಗೆ ಬಂದಿದ್ದಾನೆ. ನಂತರ ಕುತೂಹಲದಿಂದ ಅದನ್ನು ಹುಡಿ ಮಾಡಿ ಬೆಂಕಿ ಕೊಟ್ಟಿದ್ದಾನೆ. ಈ ವೇಳೆ ಏಕಾಏಕಿ ಪಟಾಕಿ ಭೀಕರವಾಗಿ ಸ್ಪೋಟಗೊಂಡಿದ್ದು, ಬಾಲಕನ ಕೈಯ ಬೆರಳುಗಳು ಗಂಭೀರವಾಗಿ ಹಾನಿಗೊಂಡು ನಷ್ಟವಾಗಿವೆ.

ಅಪಘಾತದ ಬಳಿಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ದುಬಾರಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನ ಸಂಕಷ್ಟವನ್ನು ಮನಗಂಡ ಶಾಸಕ ಅಶೋಕ್ ರೈ ಅವರು, ಬಾಲಕನ ಚಿಕಿತ್ಸಾ ವೆಚ್ಚಕ್ಕಾಗಿ ಸರ್ಕಾರದ ಮಟ್ಟದಲ್ಲಿ ವಿಶೇಷ ಮುತುವರ್ಜಿ ವಹಿಸಿ ಸಿಎಂ ಪರಿಹಾರ ನಿಧಿಗೆ ಶಿಫಾರಸು ಮಾಡಿದ್ದರು. ಇದರ ಫಲವಾಗಿ ಇದೀಗ ಪರಿಹಾರ ಧನ ಮಂಜೂರಾಗಿದ್ದು, ಸಂತ್ರಸ್ತ ಬಾಲಕನ ಕುಟುಂಬಕ್ಕೆ ತುಸು ನೆಮ್ಮದಿ ಸಿಕ್ಕಂತಾಗಿದೆ.

Category
ಕರಾವಳಿ ತರಂಗಿಣಿ