image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಪರಿಷ್ಕೃತ ದರ ಪ್ರಕಟ: ನವೆಂಬರ್ 1 ರಿಂದ ಜಾರಿಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಪರಿಷ್ಕೃತ ದರ ಪ್ರಕಟ: ನವೆಂಬರ್ 1 ರಿಂದ ಜಾರಿಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಪ್ರಯಾಣಿಕರ ದರವನ್ನು ಪರಿಷ್ಕರಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಆದೇಶ ಹೊರಡಿಸಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್‌ಜಿ (CNG) ಮತ್ತು ಎಲ್‌ಪಿಜಿ (LPG) ಅನಿಲಗಳ ಬೆಲೆ ಹಾಗೂ ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿರುವುದರಿಂದ ಆಟೋರಿಕ್ಷಾ ಚಾಲಕರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಹಿಂದಿನ ಆದೇಶದಂತೆ ಮೊದಲ 1.5 ಕಿ.ಮೀ.ಗೆ ಇದ್ದ ರೂ. 40-00 ನ್ನು ಈಗ ರೂ. 50-00 ಕ್ಕೆ ಹೆಚ್ಚಿಸಲಾಗಿದೆ (ಇದು ಗರಿಷ್ಠ 3 ಜನ ಪ್ರಯಾಣಿಕರಿಗೆ ಅನ್ವಯಿಸುತ್ತದೆ). ಹಾಗೆಯೇ, ನಂತರದ ಪ್ರತಿ ಕಿಲೋಮೀಟರ್‌ಗೆ ರೂ. 23-00 ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರ ಸರಕುಗಳಿಗೆ ಸಂಬಂಧಿಸಿದಂತೆ, ಮೊದಲ 10 ನಿಮಿಷಗಳ ಕಾಲ ಕಾಯುವಿಕೆಗೆ ಉಚಿತ ಅವಕಾಶವಿದ್ದು, ನಂತರದ ಪ್ರತಿ 15 ನಿಮಿಷಗಳಿಗೆ ಅಥವಾ ಅದರ ಭಾಗಕ್ಕೆ ರೂ. 5-00 ಹಾಗೂ ಮೊದಲ 20 ಕಿಲೋಮೀಟರ್ ನಂತರದ ಪ್ರತಿ 20 ಕಿಲೋಮೀಟರ್ ಅಥವಾ ಅದರ ಭಾಗಕ್ಕೆ ರೂ. 5-00 ದರ ನಿಗದಿಪಡಿಸಲಾಗಿದೆ. ರಾತ್ರಿ ವೇಳೆ ಅಂದರೆ ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 05:00 ಗಂಟೆಯವರೆಗೆ ಸಾಮಾನ್ಯ ದರದ ಮೇಲೆ ಶೇಕಡಾ 20 ರಷ್ಟು ಹೆಚ್ಚುವರಿ ದರವನ್ನು ಪಡೆಯಬಹುದಾಗಿದೆ.

ಪರಿಷ್ಕರಿಸಲಾದ ಈ ಹೊಸ ದರವು 2026ರ ನವೆಂಬರ್ 01 ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರು ತಮ್ಮ ರಿಕ್ಷಾಗಳಲ್ಲಿ ಕಡ್ಡಾಯವಾಗಿ ಮೀಟರ್‌ಗಳನ್ನು ರಿಕ್ಯಾಲಿಬ್ರೇಷನ್ (Recalibration) ಮಾಡಿಸಿ ಸೀಲ್ ಹಾಕಿಸಬೇಕು ಹಾಗೂ ಪರಿಷ್ಕೃತ ದರಪಟ್ಟಿಯನ್ನು ವಾಹನದಲ್ಲಿ ಪ್ರದರ್ಶಿಸಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ದಂಡ ವಿಧಿಸುವುದು, ಪರವಾನಿಗೆ ಅಮಾನತ್ತು ಅಥವಾ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Category
ಕರಾವಳಿ ತರಂಗಿಣಿ