image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

5ನೇ ವರ್ಷದ ‘ಪಿಲಿ ಅಜನೆ’ ಆಮಂತ್ರಣ ಪತ್ರಿಕೆ ಬಿಡುಗಡೆ

5ನೇ ವರ್ಷದ ‘ಪಿಲಿ ಅಜನೆ’ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಮಂಗಳೂರಿನ ದೀಪಾ ಕಂಫರ್ಟ್ಸ್ ಸಮೀಪ ಶ್ರೀ ಪ್ರಮೋದ್ ಕರ್ಕೇರ ಹಾಗೂ ಪಿಲಿ ಅಜನೆ ತಂಡದ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ 5ನೇ ಆವೃತ್ತಿಯ “ಪಿಲಿ ಅಜನೆ” ಹುಲಿ ಕುಣಿತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಭಗವತಿ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆ ಕಾರ್ಯಕ್ರಮಕ್ಕೂ ಮುನ್ನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಲಾಯಿತು.

ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಹಲವು ಹೆಸರಾಂತ ಹುಲಿ ಕುಣಿತ ತಂಡಗಳ ಪ್ರದರ್ಶನದ ಮೂಲಕ ಜನಮನ ಗೆದ್ದಿರುವ “ಪಿಲಿ ಅಜನೆ” ಕಾರ್ಯಕ್ರಮವು ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಆಯೋಜಕರ ಮಾಹಿತಿಯಂತೆ, ಅಕ್ಟೋಬರ್ 21ರ ಬುಧವಾರದಂದು ಕಾರ್ಯಕ್ರಮ ನಿಗದಿಯಾಗಿದ್ದು, ಹುಲಿ ಕುಣಿತ ಪ್ರದರ್ಶನಕ್ಕೂ ಮುನ್ನ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಶುಭ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿರುವ ಪ್ರಮೋದ್ ಕರ್ಕೇರ, ಪ್ರೇಮ್ ಸಾಲ್ಯಾನ್, ಹಿತೇಶ್ ಬೇಕಲ್, ಕಾರ್ತಿಕ್, ರಕ್ಷಿತ್ ಆರ್. ಪೂಜಾರಿ, ಯಶ್ಪಾಲ್ ಸಾಲ್ಯಾನ್, ರಂಜಿತ್, ಹರ್ಷಿತ್, ಆಶೀಶ್, ಅನುಷ್, ಶಾರುಲ್ ಹಾಗೂ ಪ್ರದೀಪ್ ಸೇರಿದಂತೆ ಪಿಲಿ ಅಜನೆ ತಂಡದ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ