ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಖ್ಯಾತ ಅಥ್ಲೀಟ್ ಎಂ. ಆರ್. ಪೂವಮ್ಮ ಅವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಶಾಸಕ ಮಂಜುನಾಥ ಭಂಡಾರಿ ಭೇಟಿ ನೀಡಿ ಶುಭ ಹಾರೈಸಿದರು.
ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ ಹಿರಿಯ ಕ್ರೀಡಾಪಟುಗಳೊಂದಿಗೆ ಪೂವಮ್ಮ ಅವರ ನಿವಾಸಕ್ಕೆ ತೆರಳಿದ ಶಾಸಕರು, ಅವರ ಈ ಅದ್ಭುತ ಕ್ರೀಡಾ ಸಾಧನೆಯನ್ನು ಶ್ಲಾಘಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟುಗಳಾದ ಸುನಿಲ್ ಕುಮಾರ್ ಶೆಟ್ಟಿ, ತಾರಾನಾಥ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಸ್ಟೀವನ್ ಡೈಸ್, ಅನಿಲ್ ಆಳ್ವ ಹಾಗೂ ಪ್ರೇಮನಾಥ್ ಶೆಟ್ಟಿ ಉಪಸ್ಥಿತರಿದ್ದು, ಪದಕ ವಿಜೇತೆ ಪೂವಮ್ಮ ಅವರಿಗೆ ಅಭಿನಂದನೆ ಸಲ್ಲಿಸಿದರು.