image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್‌ಜೆಇಸಿಯಲ್ಲಿ ಅಕ್ಟೋಬರ್ 6, 7ರಂದು 'ಟಿಯಾರಾ ’26' ರಾಷ್ಟ್ರೀಯ ಉತ್ಸವ

ಎಸ್‌ಜೆಇಸಿಯಲ್ಲಿ ಅಕ್ಟೋಬರ್ 6, 7ರಂದು 'ಟಿಯಾರಾ ’26' ರಾಷ್ಟ್ರೀಯ ಉತ್ಸವ

ಮಂಗಳೂರು : ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ತನ್ನ ವಾರ್ಷಿಕ ರಾಷ್ಟ್ರಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ 'ಟಿಯಾರಾ ’26 – ಟೆಕ್, ಟ್ಯಾಲೆಂಟ್ ಮತ್ತು ಟ್ರಯಂಫ್' ಅನ್ನು ಅಕ್ಟೋಬರ್ 6 ಮತ್ತು 7, 2026 ರಂದು ಆಯೋಜಿಸಿದೆ. ದೇಶಾದ್ಯಂತದ ಯುಜಿ, ಪಿಜಿ ಹಾಗೂ ವಿವಿಧ ಪದವಿ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವ ಈ ಎರಡು ದಿನಗಳ ಉತ್ಸವವು ತಂತ್ರಜ್ಞಾನ, ಸೃಜನಶೀಲತೆ, ಪ್ರತಿಭೆ ಮತ್ತು ಮನರಂಜನೆಯ ಅಪೂರ್ವ ಸಂಗಮವಾಗಲಿದ್ದು, ವಿವಿಧ ಸ್ಪರ್ಧೆಗಳ ವಿಜೇತರಿಗೆ ಒಟ್ಟು ₹5,00,000 ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಈ ಉತ್ಸವದಲ್ಲಿ ನಾಲ್ಕು ಮುಖ್ಯ ವಿಭಾಗಗಳಲ್ಲಿ 25ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ತಾಂತ್ರಿಕ ವಿಭಾಗದಲ್ಲಿ ಆರ್‌ಸಿ ಬ್ಲೇಜ್, ಹೈಡ್ರೋ ಡೈನಾಮಿಕ್ಸ್, ಒನ್ ಪೀಸ್, ಪಿಚ್ ಟ್ಯಾಂಕ್, ರೋಬೋ ಕಿಕ್, ರೂಟ್ ಲೈನ್, ಡ್ರೋನ್ ಝೋನ್ ಮತ್ತು ಗೇಮ್ ಆಫ್ ಸೀಸರ್ ಸ್ಪರ್ಧೆಗಳು ನಡೆಯಲಿವೆ. ಮೆಗಾ ಇವೆಂಟ್‌ಗಳಾಗಿ ರೋಬೋ ವಾರ್ಸ್, ಫ್ಲೈಟ್ ಫ್ಯೂರಿ, ಫ್ಯಾಷನ್ ಫ್ಲೇರ್, ಸ್ಪಿನ್ ದಿ ಡಿಸ್ಕ್ ಮತ್ತು ಗ್ರೂವ್ ಸೇರಿವೆ. ಸಾಂಸ್ಕೃತಿಕ ವಿಭಾಗದಲ್ಲಿ ಸ್ವರ ಸಿಂಫನಿ ಹಾಗೂ ಡ್ಯಾನ್‌ಸಿಂಕ್ ಒಳಗೊಂಡಿದ್ದರೆ, ತಾಂತ್ರಿಕೇತರ ವಿಭಾಗದಲ್ಲಿ ಗ್ರೋಜಾ ಗಾಂಟ್ಲೆಟ್, ಕ್ವಿಜ್ ವಿಝ್, ಗೋಲ್ಡನ್ ಟ್ರೇಲ್, ಸಿಂಗ್ಯುಲಾರಿಟಿ ಶೋಡೌನ್, ಬ್ಯಾಟಲ್ ಆಫ್ ಬೂಯಾ, ಹಸಲ್ ಮ್ಯಾನೇಜರ್, ಪಿಕ್ಸೆಲ್ ಮೇನಿಯಾ, ರೀಲೋಡ್, ಪ್ರೆಸ್‌ಕಾನ್ ಹಾಗೂ ಲೇಟೆಂಟ್ ಅಟ್ ಟಿಯಾರಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಉತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಲಾದ 'ಡಿಜೆ ನೈಟ್'ನಲ್ಲಿ ಪ್ರಸಿದ್ಧ ಡಿಜೆ ನೀಲ್ ಎಸ್ ಛಬ್ರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿಗಾಗಿ www.tiarasjec.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಉಪನ್ಯಾಸಕ ಸಂಯೋಜಕರಾದ ಸಚಿನ್ ಯು (9449534084), ಹಿಮಾನಿ ಕಿಶನ್ ರಾಜ್ (8970367529) ಅಥವಾ ವಿದ್ಯಾರ್ಥಿ ಸಂಯೋಜಕರಾದ ಪ್ರತೀಕ್ ಮೊರಾಸ್ (9148218235), ನಾಝ್ಮಿನ್ ಝಿಯಾ (6282714012) ಅವರನ್ನು ಸಂಪರ್ಕಿಸಬಹುದು.

Category
ಕರಾವಳಿ ತರಂಗಿಣಿ