image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಮುದಾಯ ಮಟ್ಟದಲ್ಲಿ ಜೀವರಕ್ಷಣೆಗೆ ಮುನ್ನುಡಿ: ಮಂಗಳೂರಿನಲ್ಲಿ ‘ಪ್ರಥಮ ಚಿಕಿತ್ಸಾ ಫೌಂಡೇಶನ್’ ಪ್ರಾರಂಭ

ಸಮುದಾಯ ಮಟ್ಟದಲ್ಲಿ ಜೀವರಕ್ಷಣೆಗೆ ಮುನ್ನುಡಿ: ಮಂಗಳೂರಿನಲ್ಲಿ ‘ಪ್ರಥಮ ಚಿಕಿತ್ಸಾ ಫೌಂಡೇಶನ್’ ಪ್ರಾರಂಭ

ಮಂಗಳೂರು: ಆಕಸ್ಮಿಕ ಅಪಘಾತಗಳು, ಹೃದಯಾಘಾತ ಅಥವಾ ತುರ್ತು ವೈದ್ಯಕೀಯ ಸನ್ನಿವೇಶಗಳು ಎದುರಾದಾಗ ಸಾರ್ವಜನಿಕರನ್ನು ಸನ್ನದ್ಧಗೊಳಿಸಿ ಜೀವರಕ್ಷಣೆ ಮಾಡುವ ಉದ್ದೇಶದಿಂದ ಮಂಗಳೂರಿನಲ್ಲಿ ‘ಪ್ರಥಮ ಚಿಕಿತ್ಸಾ ಫೌಂಡೇಶನ್’ (First Aid Foundation - PCF) ಉದ್ಘಾಟನೆಗೊಳ್ಳುತ್ತಿದೆ ಎಂದು ಫೌಂಡೇಶನ್ ಮುಖ್ಯಸ್ಥ ಜೀದು ರಾದಾಕೃಷ್ಣ  ತಿಳಿಸಿದರು. 

 ನಗರದ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತುರ್ತು ಪರಿಸ್ಥಿತಿಗಳಲ್ಲಿ ಆಸ್ಪತ್ರೆಗೆ ಸೇರಿಸುವ ಮುನ್ನ ಸ್ಥಳದಲ್ಲೇ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ವೈದ್ಯಕೀಯ ನೆರವು ಸಿಗುವಂತೆ ಮಾಡಲು ಈ ಸಂಸ್ಥೆಯು ಸಾರ್ವಜನಿಕರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿದೆ.
 ಸುರಕ್ಷಿತ, ಆರೋಗ್ಯಕರ ಮತ್ತು ಮಾನವೀಯ ಸಮಾಜವನ್ನು ನಿರ್ಮಿಸುವುದು ಫೌಂಡೇಶನ್‌ನ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದರು. ಕೇವಲ ಮಂಗಳೂರಿಗಷ್ಟೇ ಸೀಮಿತವಾಗದೆ ಇಡೀ ದೇಶಾದ್ಯಂತ ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೊಲೀಸರನ್ನು ‘ಮೊದಲ ಸ್ಪಂದಕರು’ (First Responders) ಆಗಿ ಸಿದ್ಧಪಡಿಸುವ ಬಿ.ಎಲ್.ಎಸ್ (BLS) ಮತ್ತು ಸಿ.ಪಿ.ಆರ್ (CPR) ತರಬೇತಿ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಡಾ. ರಂಜನ್ ಅವರು 'ತರಬೇತುದಾರರ ತರಬೇತುದಾರ' ಆಗಿ ಸಾರ್ವಜನಿಕರಿಗೆ ಅತ್ಯುನ್ನತ ಮಟ್ಟದ ಕಾರ್ಯಸಾಮರ್ಥ್ಯ ಮೂಡಿಸುವ ಹೊಣೆ ಹೊತ್ತಿದ್ದಾರೆ.

ಸಂಸ್ಥೆಯು ಪ್ರಥಮ ಚಿಕಿತ್ಸೆಯ ಜೊತೆಗೆ ಸಮಾಜದ ವಿವಿಧ ರಂಗಗಳಲ್ಲಿ ಜಾಗೃತಿ ಮೂಡಿಸಲು ಯೋಜನೆ ರೂಪಿಸಿದೆ. ಹಿರಿಯ ನಾಗರಿಕರ ಆರೋಗ್ಯ ಮತ್ತು ಆರೈಕೆಯ ಬಗ್ಗೆ ಶ್ರೀಮತಿ ಫ್ರೀಡಾ, ಮಹಿಳೆಯರ ಆರೋಗ್ಯ, ಋತುಚಕ್ರದ ನೈರ್ಮಲ್ಯ ಹಾಗೂ ಸ್ತನ ಕ್ಯಾನ್ಸರ್ ಜಾಗೃತಿಯ ಕುರಿತು ಶ್ರೀಮತಿ ಆಯಿಷಾ, ಸಮುದಾಯ ಕ್ಷೇಮಾಭಿವೃದ್ಧಿಯ ಬಗ್ಗೆ ಡಾ. ಪ್ರಜ್ವಲ್ ಹಾಗೂ ರಕ್ತದಾನ ಮತ್ತು ಅಂಗದಾನ ಶಪಥ ಪ್ರೋತ್ಸಾಹಿಸುವ ಕುರಿತು ಕುಮಾರಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ ಎಂದರು.

Category
ಕರಾವಳಿ ತರಂಗಿಣಿ