image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಾಲೂಕು ಮಟ್ಟದ ವಾಲಿಬಾಲ್: ವಿವೇಕಾನಂದ ಪಿಯು ಕಾಲೇಜು ಬಾಲಕರ ತಂಡಕ್ಕೆ ದ್ವಿತೀಯ ಸ್ಥಾನ

ತಾಲೂಕು ಮಟ್ಟದ ವಾಲಿಬಾಲ್: ವಿವೇಕಾನಂದ ಪಿಯು ಕಾಲೇಜು ಬಾಲಕರ ತಂಡಕ್ಕೆ ದ್ವಿತೀಯ ಸ್ಥಾನ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಹಾಗೂ ಸುದಾನ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದೆ. ಈ ಪಂದ್ಯಾಟದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ವಿವೇಕಾನಂದ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಮೃತ್ ಬಿ. ಕೆ ಅವರು 'ಬೆಸ್ಟ್ ಅಟ್ಯಾಕರ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾಧಕ ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಪ್ರೀತಂ ಸಿ.ಆರ್, ಚೇತನ್ ಎಮ್.ಎಮ್, ನಿರೀಕ್ಷಿತ್, ಪ್ರೀತಂ, ಜಯಂತ್ ಕೆ.ಎಸ್ ಹಾಗೂ ದ್ವಿತೀಯ ಪಿಯುಸಿಯ ಕಾರ್ತಿಕ್ ಕೆಮ್ಮಿಂಜೆ, ಸಾತ್ವಿಕ್, ಅಮೃತ್ ಬಿ.ಕೆ, ವರ್ಷಿತ್ ಬಿ.ಎಮ್, ಭವಿಶ್ ಡಿ ಗೌಡ, ಪೃಥ್ವಿರಾಜ್ ಕೆ.ಆರ್ ಮತ್ತು ಆತ್ಮಿಕ್ ಎ.ಎಸ್ ಭಾಗವಹಿಸಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಅವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ಈ ತಂಡವು ಪಂದ್ಯಾಟದಲ್ಲಿ ಭಾಗವಹಿಸಿ ಕೀರ್ತಿ ತಂದಿದೆ. ಯಶಸ್ಸು ಸಾಧಿಸಿದ ತಂಡವನ್ನು ಮತ್ತು ತರಬೇತುದಾರರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ