image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಅಕ್ಟೋಬರ್ 26 ರಿಂದ ರಫ್ತು ನಿರ್ವಹಣಾ ತರಬೇತಿ ಶಿಬಿರ

ಮಂಗಳೂರಿನಲ್ಲಿ ಅಕ್ಟೋಬರ್ 26 ರಿಂದ ರಫ್ತು ನಿರ್ವಹಣಾ ತರಬೇತಿ ಶಿಬಿರ

ಮಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಂಗಸಂಸ್ಥೆಯಾದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ (ವಿವಿಟಿಸಿ) ಮಂಗಳೂರು ಶಾಖೆಯ ವತಿಯಿಂದ ನಗರದಲ್ಲಿ ಅಕ್ಟೋಬರ್ 26 ರಿಂದ 31 ರವರೆಗೆ 6 ದಿನಗಳ "ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ"ವನ್ನು ಆಯೋಜಿಸಲಾಗಿದೆ. ಎಂ.ಜಿ. ರಸ್ತೆಯಲ್ಲಿರುವ ಹೋಟೆಲ್ ದೀಪಾ ಕಂಫರ್ಟ್ಸ್‌ನಲ್ಲಿ ಈ ವಸತಿ ರಹಿತ ಶಿಬಿರ ನಡೆಯಲಿದೆ.

ಅಂತರರಾಷ್ಟ್ರೀಯ ವ್ಯಾಪಾರ ಮತ್ತು ರಫ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಗ್ರ ಜ್ಞಾನ ಮೂಡಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ರಫ್ತು ನಿಯಮಾವಳಿಗಳು, ಅಂತರರಾಷ್ಟ್ರೀಯ ಮಾರುಕಟ್ಟೆ, ರಫ್ತು ಪ್ಯಾಕೇಜಿಂಗ್, ಹಣಕಾಸು ವ್ಯವಸ್ಥೆ, ವಿದೇಶಿ ವಿನಿಮಯ, ಇ-ಕಾಮರ್ಸ್ ಹಾಗೂ ಜಿಎಸ್‌ಟಿ ನಿಯಮಗಳ ಕುರಿತು ಅನುಭವಸ್ಥ ತಜ್ಞರು ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ಡಿಜಿಎಫ್‌ಟಿ, ಕಸ್ಟಮ್ಸ್, ಆರ್‌ಬಿಐ, ಅಪೇಡಾ, ಫಿಯೋ ಹಾಗೂ ಇಸಿಜಿಸಿ ನಂತಹ ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಗಳ ಕಾರ್ಯಾಚರಣೆ ಬಗ್ಗೆ ವಿವರವಾದ ಉಪನ್ಯಾಸಗಳು ನಡೆಯಲಿವೆ.

ಹೊಸದಾಗಿ ರಫ್ತು ಉದ್ಯಮ ಆರಂಭಿಸಲು ಆಸಕ್ತಿಯುಳ್ಳವರು, ಹಾಲಿ ರಫ್ತುದಾರರು, ಉತ್ಪಾದಕರು, ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆಯಬಹುದು. ಆಸಕ್ತರು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಅಧಿಕೃತ ವೆಬ್‌ಸೈಟ್ (www.vtpc.karnataka.gov.in) ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮಂಗಳೂರಿನ ಯೆಯ್ಯಾಡಿಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡದಲ್ಲಿರುವ ವಿವಿಟಿಸಿ ಉಪ ನಿರ್ದೇಶಕರನ್ನು (ಮೊಬೈಲ್: 9480562936, 8073934390, 7204753219) ಸಂಪರ್ಕಿಸಬಹುದಾಗಿದೆ.

Category
ಕರಾವಳಿ ತರಂಗಿಣಿ