image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಶಿಕ್ಷಣ ಪ್ರಕೋಷ್ಠ ಸಮಿತಿ ಪದಗ್ರಹಣ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಶಿಕ್ಷಣ ಪ್ರಕೋಷ್ಠ ಸಮಿತಿ ಪದಗ್ರಹಣ

ಮಂಗಳೂರು : ಮಂಗಳೂರಿನ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಶಿಕ್ಷಣ ಪ್ರಕೋಷ್ಟದ ಆರಂಭ, ಪ್ರಥಮ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಪ್ಟೆಂಬರ್ 26 ರ ಶುಕ್ರವಾರದಂದು ನಡೆಯಿತು.

ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಪದಗ್ರಹಣ ನೆರವೇರಿಸಿದರು. ಜಿಲ್ಲಾ ಸಂಚಾಲಕರಾಗಿ ವಸಂತ ಮಂಜನಾಡಿ, ಸಹ ಸಂಚಾಲಕರಾಗಿ ನಾರಾಯಣ ಗೌಡ ಬಂಟ್ವಾಳ, ಮಂಗಳೂರು ಸೌತ್ ಸಂಚಾಲಕರಾಗಿ ಏಕೆ ಬಾಬು ಹಾಗೂ ಮಂಗಳೂರು ಮಂಡಲ ಸಂಚಾಲಕರಾಗಿ ವಸಂತ್ ರೈ ಬಿಕೆ ಆಯ್ಕೆಯಾದರು. ಇದರೊಂದಿಗೆ ಮೂಡಬಿದ್ರೆಯಿಂದ ಸುರೇಶ್ ಭಂಡಾರಿ, ಮಂಗಳೂರು ಉತ್ತರದಿಂದ ವಿನೀತ್ ನಾಯರ್, ಮಂಗಳೂರು ಸೌತ್‌ನಿಂದ ಸತ್ಯನಾರಾಯಣ ಭಟ್, ಬೆಳ್ತಂಗಡಿಯಿಂದ ಸುರೇಶ್ ಎಂ ಎಸ್, ಸುಳ್ಯದಿಂದ ಮನಮೋಹನ್ ಮತ್ತು ಪುತ್ತೂರಿನಿಂದ ರಾಜೇಂದ್ರ ಮಾಸ್ಟರ್ ಅವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಶಿಕ್ಷಣ ಸಹ ಸಂಚಾಲಕರು ಹಾಗೂ ಬಿಜೆಪಿ ಸೇವಾಸಂಕಲ್ಪದ 'ಬದಲಾವಣೆಯ ಕಥೆ' ಕಾರ್ಯಕ್ರಮದ ರಾಜ್ಯ ಸಹ ಉಸ್ತುವಾರಿ ಎಂ ಜಿ ಭಟ್ ಕುಮಟಾ ಅವರು ಭಾಗವಹಿಸಿ, ಬದಲಾವಣೆಯ ಕಥೆ ಚಟುವಟಿಕೆಗಳಲ್ಲಿ ಪ್ರಕೋಷ್ಠದ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಸೂಚಿಸಿದರು. ಹಾಗೆಯೇ ಪ್ರಕೋಷ್ಟದ ಜಿಲ್ಲಾ ಮತ್ತು ಮಂಡಲ ಮಟ್ಟದ ಸಮಿತಿಗಳ ಕುರಿತು ಮಾರ್ಗದರ್ಶನ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರಾದ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಟದ ಸದಸ್ಯ ಮತ್ತು ದಕ್ಷಿಣ ಕನ್ನಡ ಶಿಕ್ಷಣ ಪ್ರಕೋಷ್ಠದ ಉಸ್ತುವಾರಿ ಮುರಳಿ ಹೊಸಮಜಲು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ವಸಂತಕುಮಾರ್ ಮಂಜನಾಡಿ ವಂದನಾರ್ಪಣೆ ಗೈದರು.

Category
ಕರಾವಳಿ ತರಂಗಿಣಿ