image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ N ವಿಶ್ವನಾಥ ನಾಯ್ಕ್ ಕೋಮಾಲಿ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ N ವಿಶ್ವನಾಥ ನಾಯ್ಕ್ ಕೋಮಾಲಿ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ N ವಿಶ್ವನಾಥ ನಾಯ್ಕ್ ಕೋಮಾಲಿ ಆಯ್ಕೆಯಾಗಿದ್ದಾರೆ. ಶ್ರೀಯುತರು 2002ರಲ್ಲಿ ಸದರಿ ಸಂಘವನ್ನು ಸಮಾನ ಮನಸ್ಕರ ಜೊತೆಗೂಡಿ ಸ್ಥಾಪಿಸಿ ಅದರ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ, ಮಹಾಪೋಷಕರಾಗಿ ಸೇವೆ ಸಲ್ಲಿಸಿ ಅನೇಕ ಮರಾಟಿ ಬಾಂಧವರನ್ನು ಸಂಘದ ಸದಸ್ಯರನ್ನಾಗಿ ಸೇರ್ಪಡೆಗೋಳಿಸುವಲ್ಲಿ ಶ್ರಮವಹಿಸಿರುತ್ತಾರೆ. 

ಶ್ರೀಯುತರು 2000ನೇ ಇಸವಿಯಲ್ಲಿ ಬಂಟ್ವಾಳ ತಾಲ್ಲೂಕು ಮರಾಟಿ ಸಮಾಜ ಸೇವಾ ಸಂಘವನ್ನು ಸ್ಥಾಪಿಸಿ ಅದರ ಸ್ಥಾಪಕ ಸಂಚಾಲಕರಾಗಿ 21ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಸಕ್ತ ಗೌರವಾಧ್ಯಕ್ಷರಾಗಿದ್ದು, ಸಂಘದಲ್ಲಿ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ನೆರವೇರಿಸಿಕೊಂಡು ಬಂದಿರುತ್ತಾರೆ. ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದಲ್ಲಿಯೂ ಕೂಡಾ ಈ ಹಿಂದೆ ಸಕ್ರಿಯರಾಗಿ ದುಡಿದಿದ್ದು, ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಶ್ರೀ ವಿಶ್ವನಾಥ ನಾಯ್ಕ್ ಕೋಮಾಲಿಯವರು 1987ರಲ್ಲಿ ಆಗಿನ KREC(NITK) ಸುರತ್ಕಲ್ ನಲ್ಲಿ ಉದ್ಯೋಗಕ್ಕೆ ಸೇರಿದಾಗಿನಿಂದ ಅಲ್ಲಿನ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುಮಾರು 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನೌಕರರ ಶ್ರೇಯೋಭಿವೃದ್ಧಿಗಾಗಿ ಬಹಳಷ್ಟು ದುಡಿದಿದ್ದಾರೆ.

ಬಳಿಕ ಶ್ರೀಯುತರು ಸಾರಿಗೆ ಇಲಾಖೆಯಲ್ಲಿ ಸೇವೆಗೆ ಸೇರಿ 32 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಇತ್ತೀಚೆಗೆ ವೃತ್ತಿಯಿಂದ ವಯೋನಿವೃತ್ತಿ ಹೊಂದಿ ತಮ್ಮ ಮೂಲ ಕ್ರಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿರುತ್ತಾರೆ ಹಾಗೂ ವಿವಿಧ ಮರಾಟಿ ಸಮಾಜ ಸೇವಾ ಸಂಘಗಳಲ್ಲೂ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ