image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕದ್ರಿ ಐಟಿಐನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಕದ್ರಿ ಐಟಿಐನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಮಂಗಳೂರು: ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವತಿಯಿಂದ ಕದ್ರಿ ಹಿಲ್ಸ್‌ನ ಸರ್ಕಾರಿ ಐ.ಟಿ.ಐ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಶುಕ್ರವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರತಿಭಾ ಅವರು, ಮಾದಕ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ದಿವ್ಯ ಸಂಕಲ್ಪವಾಗಬೇಕು ಹಾಗೂ ಸಮಾಜದಲ್ಲಿ ಈ ಕುರಿತು ವ್ಯಾಪಕ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಸತೀಶ ಎ.ಎಸ್. ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿಯು ಸ್ವ ಇಚ್ಛೆಯಿಂದ ನಿರ್ಧಾರ ಕೈಗೊಂಡು ವ್ಯಸನ ಮುಕ್ತನಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಬ್ಲ್ಯು.ಹೆಚ್.ಸಿ ಚಂದ್ರಲೇಖ, ಉಪ ಪ್ರಾಚಾರ್ಯ ರಮೇಶ್ ನಾಯ್ಕ್, ಆಡಳಿತಾಧಿಕಾರಿ ಪ್ರತಿಮಾ ಎಂ., ಪ್ರಭಾರೆ ತರಬೇತಿ ಅಧಿಕಾರಿ ಅಲೆಕ್ಸಾಂಡರ್ ಸಿ.ಜೆ., ಸ್ವರ್ಣಗೌರಿ, ರವಿ ಕೆ. ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಂದನ್, ಕಾರ್ಯದರ್ಶಿ ಶ್ರೀಜನ್, ಕ್ರೀಡಾ ಕಾರ್ಯದರ್ಶಿ ನೂತನ್ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷಯ್ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಪುರುಷೋತ್ತಮ ಎಲ್. ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

Category
ಕರಾವಳಿ ತರಂಗಿಣಿ