image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊಚ್ಚಿಯಲ್ಲಿ ಸೆ. 27ಕ್ಕೆ ಕೇರಳ-ಕರ್ನಾಟಕ ಜಾನಪದ ಉತ್ಸವದಲ್ಲಿ ಖ್ಯಾತ ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್‌ಗೆ 'ಸಾಧಕ ರತ್ನ' ಪ್ರಶಸ್ತಿ

ಕೊಚ್ಚಿಯಲ್ಲಿ ಸೆ. 27ಕ್ಕೆ ಕೇರಳ-ಕರ್ನಾಟಕ ಜಾನಪದ ಉತ್ಸವದಲ್ಲಿ ಖ್ಯಾತ ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್‌ಗೆ 'ಸಾಧಕ ರತ್ನ' ಪ್ರಶಸ್ತಿ

ಮಂಗಳೂರು/ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 27ರಂದು ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ 'ಕೇರಳ-ಕರ್ನಾಟಕ ಜಾನಪದ ಉತ್ಸವ' ನೆರವೇರಲಿದೆ. ಈ ಸಾಂಸ್ಕೃತಿಕ ಸಮಾರಂಭದಲ್ಲಿ ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಖ್ಯಾತ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ 'ಸಾಧಕ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು.

ತಮ್ಮ ವೈವಿಧ್ಯಮಯ ಕ್ರೀಡಾ ಬರವಣಿಗೆ ಹಾಗೂ ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ ಜಗದೀಶ್ಚಂದ್ರ ಅಂಚನ್ ಅವರಿಗೆ ಈಗಾಗಲೇ ಹಲವಾರು ರಾಜ್ಯ ಹಾಗೂ ಅಂತರ್-ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇವರಿಗೆ 2013ರಲ್ಲಿ 'ಮೀಡಿಯಾ ಅವಾರ್ಡ್', 2014ರಲ್ಲಿ 'ಸಮಾಜ ರತ್ನ' ರಾಜ್ಯ ಪ್ರಶಸ್ತಿ, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಹಾಗೂ ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, 2019ರಲ್ಲಿ ಜಾನಪದ ಲೋಕ ರಾಜ್ಯ ಪ್ರಶಸ್ತಿ ಮತ್ತು 'ನಮ್ಮ ಕುಡ್ಲ ಸಾಧಕ ಪ್ರಶಸ್ತಿ' ಸಿಕ್ಕಿವೆ.

ಅಲ್ಲದೆ, 2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ 'ಕೆ. ಎ. ನೆಟ್ಟಕಲ್ಲಪ್ಪ' ರಾಜ್ಯ ಪ್ರಶಸ್ತಿ, 2021ರಲ್ಲಿ 'ಸಿದ್ಧಗಂಗಾಶ್ರೀ' ರಾಜ್ಯ ಪ್ರಶಸ್ತಿ, 2022ರಲ್ಲಿ ಕಾಸರಗೋಡು ಘಟಕದಿಂದ 'ಕೆ. ಆರ್. ಟ್ಯಾಗೋರ್' ದತ್ತಿ ನಿಧಿ ಪ್ರಶಸ್ತಿ, 2023ರಲ್ಲಿ 'ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ' ಹಾಗೂ 'ಸಾಧನ ಪ್ರಶಸ್ತಿ'ಗಳು ಲಭಿಸಿವೆ. ಇತ್ತೀಚೆಗೆ 2024ರಲ್ಲಿ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ, 2026ರಲ್ಲಿ 'ಜಾನಪದ ರತ್ನ' ಪ್ರಶಸ್ತಿ, 'ಕನ್ನಡ ಪಯಸ್ವಿನಿ ಅವಾರ್ಡ್-2026' ಅಂತರ್-ರಾಜ್ಯ ಪ್ರಶಸ್ತಿ ಹಾಗೂ ಪ್ರತಿಷ್ಠಿತ 'ಬಸವಶ್ರೀ-2026' ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರ ಮುಡಿಗೆೇರಿವೆ.

Category
ಕರಾವಳಿ ತರಂಗಿಣಿ