image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಕಾಲೇಜಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಕಾಲೇಜಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಲಕರ ವಿಭಾಗದಲ್ಲಿ 10 ಅಂಕ ಹಾಗೂ ಬಾಲಕಿಯರ ವಿಭಾಗದಲ್ಲಿ 13 ಅಂಕಗಳನ್ನು ಪಡೆಯುವ ಮೂಲಕ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ಸಮರ್ಥ್ ಪ್ರಥಮ, ಸಂತೋಷ್ ದ್ವಿತೀಯ, ವರುಣ್ ತೃತೀಯ ಹಾಗೂ ಮಿಥುನ್ ನಾಲ್ಕನೇ ಸ್ಥಾನ ಪಡೆದರೆ, ಎಸ್.ಡಿ.ಎಂ. ಕಾಲೇಜು ಉಜಿರೆಯ ಲಿತೇಶ್ ಐದನೇ ಸ್ಥಾನ ಹಾಗೂ ಆಳ್ವಾಸ್‌ನ ದರ್ಶನ್ ಆರನೇ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ನಾಗಿಣಿ ಪ್ರಥಮ ಹಾಗೂ ಪ್ರಿಯಾಂಕ ದ್ವಿತೀಯ ಸ್ಥಾನ ಪಡೆದರು. ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜಿನ ಮೋಕ್ಷ ತೃತೀಯ, ಆಳ್ವಾಸ್‌ನ ಸ್ವಪ್ನಾ ನಾಲ್ಕನೇ ಸ್ಥಾನ, ಬೆಥನಿ ಕಾಲೇಜಿನ ಪ್ರಮೀಳಾ ಐದನೇ ಸ್ಥಾನ ಹಾಗೂ ಆಳ್ವಾಸ್‌ನ ಜಿ. ಕಿರಣ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಸಾಧನೆಗೈದ ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Category
ಕರಾವಳಿ ತರಂಗಿಣಿ