image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇನ್ ಲ್ಯಾಂಡ್ ಸಮೂಹದ ಇನ್‌ಲ್ಯಾಂಡ್ ಯೂಫೋರಿಯಾಗೆ ಮಂಗಳೂರಿನಲ್ಲಿ ಶಿಲಾನ್ಯಾಸ

ಇನ್ ಲ್ಯಾಂಡ್ ಸಮೂಹದ ಇನ್‌ಲ್ಯಾಂಡ್ ಯೂಫೋರಿಯಾಗೆ ಮಂಗಳೂರಿನಲ್ಲಿ ಶಿಲಾನ್ಯಾಸ

ಮಂಗಳೂರು: ಮಂಗಳೂರಿನಲ್ಲಿ ಗುಣಮಟ್ಟ ಹಾಗೂ ಪ್ರತಿಷ್ಠಿತ ವಸತಿ ಯೋಜನೆಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಇನ್‌ಲ್ಯಾಂಡ್  ಸಮೂಹದ ನೂತನ ಪ್ರೀಮಿಯಂ ವಸತಿ ಯೋಜನೆಯಾದ 'ಇನ್ ಲ್ಯಾಂಡ್ ಯೂಫೋರಿಯಾ'ಗೆ ನಗರದ ಕದ್ರಿಯ ಆರ್ಯ ಸಮಾಜ ರಸ್ತೆಯ ಬಳಿ ಸೋಮವಾರ  ಹಿಂದು,ಮುಸ್ಲಿಂ, ಕ್ರೈಸ್ತ ಧರ್ಮದ ಧಾರ್ಮಿಕ ವಿಧಿಗಳೊಂದಿಗೆ  ಶಿಲಾನ್ಯಾಸ ನೆರೆವೇರಿತು.

ಕಾರ್ಯಕ್ರಮದಲ್ಲಿ ಇನ್‌ಲ್ಯಾಂಡ್ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಅತಿಥಿಗಳನ್ನು ಸ್ವಾಗತಿಸಿ ಮಾತನಾಡುತ್ತಾ,ಗುಣಮಟ್ಟ ವಿಶ್ವಾಸ, ಪಾರದರ್ಶಕತೆ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಅಳವಡಿಸಿಕೊಂಡ 'ಇನ್ ಲ್ಯಾಂಡ್ ಯೂಫೋರಿಯಾ' ನಗರದಲ್ಲಿ ಅತ್ಯಂತ  ಸುಂದರವಾದ ವಿನ್ಯಾಸವನ್ನು ಹೊಂದಿರುವ ಯೋಜನೆಯಾಗಿದೆ. ಮುಂಬಯಿಯ ಖ್ಯಾತ ಆರ್ಕಿಟೆಕ್ಟ್ ಅವರಿಂದ ಸುಂದರವಾದ ಯೋಜನೆಯ ವಿನ್ಯಾಸವನ್ನು ರೂಪಿಸಲಾಗಿದೆ. 'ಇನ್-ಲ್ಯಾಂಡ್‌ಫೋ ರಿಯಾ', ಐಷಾರಾಮಿ ಜೀವನಶೈಲಿ, ಆಧುನಿಕ ಸೌಲಭ್ಯಗಳ12 ಅಂತಸ್ತಿನ ಪ್ರೀಮಿಯಂ ಟವರ್‌ನಲ್ಲಿ 2,475 ಹಾಗೂ 2,740 ಚದರ ಅಡಿ ವಿಸ್ತೀರ್ಣದ 3 ಬಿಎಚ್‌ ಕೆ ಐಷಾರಾಮಿ ನಿವಾಸಗಳು ಇರಲಿವೆ. ಪ್ರತಿ ನಿವಾಸದಲ್ಲಿ ಎಲ್ಲಾ ಬೆಡ್ ರೂಂಗಳಿಗೆ ಅಟ್ಯಾಚ್ ಬಾತ್‌ರೂಂ, ಟಾಯ್ಲೆಟ್, ಡೊಮೆಸ್ಟಿಕ್ ಹೆಲ್ಫ್ ರೂಂ,ಮನೆ ಸಹಾಯಕರ ಕೊಠಡಿ, ಎರಡು ಕವರ್ಡ್ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾ ಗಿದೆ.  ಆಧುನಿಕ ವಾಸ್ತುಶಿಲ್ಪ ಮತ್ತು ಆಕರ್ಷಕ ವಿನ್ಯಾಸದೊಂದಿಗೆ 'ಇನ್ ಲ್ಯಾಂಡ್ ಯೂಫೋರಿಯಾ'ವನ್ನು ರೂಪಿಸಲಾಗುತ್ತಿದೆ.

ವಿಶ್ವಮಟ್ಟದ ಸೌಲಭ್ಯಗಳ ಸಮಗ್ರ ಯೋಜನೆ. ಇನ್‌ಲ್ಯಾಂಡ್ ಯೂಫೋರಿಯಾ' ಯೋಜನೆಯು ಪ್ರಮುಖ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಶಾಪಿಂಗ್ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು ಹಾಗೂ ನಗರದ ಇತರ ಅಗತ್ಯ ಸೌಲಭ್ಯಗಳಿಗೆ ಸುಲಭ ಸಂಪರ್ಕ ಹೊಂದಿದೆ.ಗುಣಮಟ್ಟದ ನಿರ್ಮಾಣ ಸಮಯಬದ್ಧ ಕಾಮಗಾರಿ, ಗ್ರಾಹಕರ ವಿಶ್ವಾಸ ಕ್ಕೆ ಪಾತ್ರವಾಗಿದೆ 'ಇನ್‌ಲ್ಯಾಂಡ್ ಯೂಫೋರಿಯಾ' ಮತ್ತೊಂದು ಮಹತ್ವದ ಪ್ರೀಮಿಯಂ ವಸತಿ ಯೋಜನೆಯಾಗಿದೆ ಎಂದವರು ತಿಳಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಮಾರಂಭದಲ್ಲಿ ಕುತ್ತಾರು ಜುಮ್ಮಾ ಮಸೀದಿಯ ಖತೀಬರಾದ ಪಿ.ಎಸ್ . ಮುಹಮ್ಮದ್ ಖಾಮಿಲ್ ಸಖಾಫಿ ಪಾಣೆ ಮಂಗಳೂರು ರವರು ಮಂಗಳೂರು ಬಂದರಿನ ಅಲ್ ಅಝೇರಿಯ ಮದರಸದ ಮುಖ್ಯ ಗುರುಗಳಾದ ಯಾಹ್ಯಾ ಮದನಿ ಅವರ ಜೊತೆ  ದುವಾ ನೆರವೇರಿಸಿದರು. ಬೆಂದೂರ್ ಚರ್ಚ್ ನ ಧರ್ಮಗುರುಗಳಾದ ವಂ.ವಾಲ್ಟರ್ ಡಿ ಸೋಜ  ಪ್ರಾರ್ಥಿಸಿ ಶುಭ ಹಾರೈಸಿದರು.ಬಾಳಂಭಟ್ ದೇವಸ್ಥಾನದ ಅರ್ಚಕರಾದ ಗಿರಿಧರ ಭಟ್  ಶಿಲಾನ್ಯಾಸದ ಧಾರ್ಮಿಕ ವಿಧಿ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಅತಿಥಿಗಳು ಯೋಜನೆಯ ಮಾಹಿತಿ ಕೈಪಿಡಿ ಬಿಡುಗಡೆ ಗೊಳಿಸಿದರು.

ಸಮಾರಂಭಕ್ಕೆ ಆಗಮಿಸಿದ ಗಣ್ಯರಾದ ಜಗದೀಶ್ ಅಧಿಕಾರಿ,ಡಾ.ಶೀಕರ ಪೈ, ಎಸ್.ಎಸ್.ನಾಯಕ್, ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ಆರ್.ಭಟ್ ಮೊದಲಾದವರು ಶುಭ ಹಾರೈಸಿದರು.ನಿರ್ದೇಶಕ ರಾದ ಮೆರಾಜ್ ಯೂಸುಫ್ ಹಾಗೂ ವಹಾಜ್ ಯೂಸುಫ್  ಅತಿಥಿಗಳನ್ನು ಸ್ವಾಗತಿಸಿದರು.

Category
ಕರಾವಳಿ ತರಂಗಿಣಿ