image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಿವಮೊಗ್ಗದಲ್ಲಿ 'ಸ್ಪಾರ್ಕ್' ಸಿನಿಮಾದ ಪ್ರಥಮ ಪ್ರದರ್ಶನ: ಭಾರತ್ ಸಿನಿಮಾಸ್‌ನಲ್ಲಿ ಸೆಪ್ಟೆಂಬರ್ 22 ರಂದು ವಿಶೇಷ ಶೋ

ಶಿವಮೊಗ್ಗದಲ್ಲಿ 'ಸ್ಪಾರ್ಕ್' ಸಿನಿಮಾದ ಪ್ರಥಮ ಪ್ರದರ್ಶನ: ಭಾರತ್ ಸಿನಿಮಾಸ್‌ನಲ್ಲಿ ಸೆಪ್ಟೆಂಬರ್ 22 ರಂದು ವಿಶೇಷ ಶೋ

ಶಿವಮೊಗ್ಗ: ನಿರಂಜನ್ ಸುಧೀಂದ್ರ ಅಭಿನಯದ ಬಹುನಿರೀಕ್ಷಿತ 'ಸ್ಪಾರ್ಕ್' ಸಿನಿಮಾದ ಮೊಟ್ಟಮೊದಲ ವಿಶೇಷ ಪ್ರದರ್ಶನಕ್ಕೆ ಶಿವಮೊಗ್ಗ ಸಾಕ್ಷಿಯಾಗಲಿದೆ. ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಈ ಚಿತ್ರವು, ಬಿಡುಗಡೆಗೆ ಮೂರು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 22ರ ಮಂಗಳವಾರ ಸಂಜೆ 7 ಗಂಟೆಗೆ ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಸಾಮಾನ್ಯ ಪ್ರೀಮಿಯರ್ ಪ್ರದರ್ಶನಗಳು ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಈ ದಿನಗಳಲ್ಲಿ, ಪ್ರಥಮ ಪ್ರದರ್ಶನವನ್ನು ಶಿವಮೊಗ್ಗದಲ್ಲೇ ಆಯೋಜಿಸಿರುವುದು ವಿಶೇಷ ಗಮನ ಸೆಳೆದಿದೆ.

ಶಿವಮೊಗ್ಗದ ಗುಡ್ಡೆಕಲ್ ಮೂಲದವರಾದ ವಿಶ್ವಾಸ್ ಮುರಳೀಧರ ನಾಯರ್ ಅವರು ಈ ಸಿನಿಮಾದಲ್ಲಿ ಲೈನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದು, ತಮ್ಮ ಹುಟ್ಟೂರಿನ ಮೇಲಿನ ಪ್ರೀತಿಯಿಂದಾಗಿ ಈ ವಿಶೇಷ ಪ್ರದರ್ಶನವನ್ನು ಇಲ್ಲಿಯೇ ಹಮ್ಮಿಕೊಂಡಿದ್ದಾರೆ. ಈ ಅದ್ಧೂರಿ ಪ್ರದರ್ಶನದಲ್ಲಿ ಚಿತ್ರತಂಡದ ಸಂಪೂರ್ಣ ಬಳಗ ಭಾಗವಹಿಸಲಿದೆ. ಶಿವಮೊಗ್ಗ ಸಿನಿಮಾಸ್ ಅಡ್ಡದ ರಘು ಗುಂಡ್ಲು ಪ್ರಚಾರ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರದ ಟ್ರೇಲರ್‌ಗೆ ನಟ ಧ್ರುವ ಸರ್ಜಾ ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಗರೀಮಾ ಅವಿನಾಶ್ ವಸಿಷ್ಠ ಬಂಡವಾಳ ಹೂಡಿದ್ದಾರೆ. ನಿರಂಜನ್ ಸುಧೀಂದ್ರ ಅವರ ವೃತ್ತಿಜೀವನದ ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರತಿಯೊಂದು ಪಾತ್ರದಲ್ಲೂ ವಿಶೇಷ ಕುತೂಹಲವಿರುವ ಈ ಕಥೆಯಲ್ಲಿ, 'ಲವ್ಲಿ ಸ್ಟಾರ್' ಪ್ರೇಮ್ ಮೊದಲ ಬಾರಿಗೆ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಜಾಕಿ ಭಾವನಾ ವಕೀಲೆಯಾಗಿ ಮತ್ತು ರಚನಾ ಇಂದರ್ ವೈದ್ಯೆಯಾಗಿ ಕಾಣಿಸಿಕೊಂಡಿದ್ದು, ಗಣೇಶ್ ರಾವ್ ಕೇಸರ್ಕರ್, ಅಶ್ವಿನ್ ಹಾಸನ್, ಧರ್ಮಣ್ಣ, ವಿಜಯ್ ಚೆಂಡೂರ್, ನೀನಾಸಂ ಅಶ್ವಥ್ ಹಾಗೂ ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Category
ಕರಾವಳಿ ತರಂಗಿಣಿ