image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಜಳಿಕೆ-ಅಯೋಧ್ಯನಗರ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

ಮಂಜಳಿಕೆ-ಅಯೋಧ್ಯನಗರ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಮಂಜಳಿಕೆ ಹಾಗೂ ಅಯೋಧ್ಯನಗರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಶುಕ್ರವಾರ ಗುದ್ದಲಿ ಪೂಜೆ ನೆರವೇರಿತು. ಈ ಕಾಮಗಾರಿಯನ್ನು 20 ಲಕ್ಷ ರೂಪಾಯಿಗಳ ವಿಶೇಷ ಅನುದಾನದಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಈ ಭಾಗದ ರಸ್ತೆ ಅಭಿವೃದ್ಧಿಯು ನಿಕಟಪೂರ್ವ ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ, ಸ್ಥಳೀಯ ಪ್ರಮುಖರಾದ ವಿಜಯಕುಮಾರ್ ಶೆಟ್ಟಿ ಸೇರಿದಂತೆ ಅನೇಕ ಪ್ರಮುಖರು ಹಾಗೂ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಪ್ರಸ್ತುತ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಅಭಾವವಿದ್ದಾಗ್ಯೂ, ಲಭ್ಯವಿರುವ ಅನುದಾನಗಳನ್ನೇ ಸಮರ್ಪಕವಾಗಿ ಹೊಂದಿಸಿಕೊಂಡು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷ ಹರೀಶ್, ಬೂತ್ ಅಧ್ಯಕ್ಷರಾದ ಚೇತನ್, ಯಶ್ಪಾಲ್, ಸುಕೇಶ್, ಪ್ರವೀಣ್ ನಿಡ್ಡೇಲ್, ಶೇಖರ್ ಕೊಟ್ಟಾರಿ, ಚಂದ್ರಶೇಖರ, ಹರೀಶ್ ಅಂಚನ್, ನಾರಾಯಣ, ಗೌಡಯ್ಯ, ಕರಿಷ್ಮ, ರಾಜಣ್ಣ, ಪವಿತ್ರ, ಪುಷ್ಪರಾಜ್, ಅರಿಗ, ನಿವೇದಿತಾ, ಡಾ. ಹರ್ಷ, ಅಪಲ್ಯ, ಡಾ. ರಮ್ಯಾ, ವಾರ್ಡಿನ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ