image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾರದಾ ಆಯುರ್ವೇದ ವೈದ್ಯಕೀಯ ಆಸ್ಪತ್ರೆಯಲ್ಲಿ ನೂತನ ಚಿಕಿತ್ಸಾ ಘಟಕಗಳ ಶುಭಾರಂಭ

ಶಾರದಾ ಆಯುರ್ವೇದ ವೈದ್ಯಕೀಯ ಆಸ್ಪತ್ರೆಯಲ್ಲಿ ನೂತನ ಚಿಕಿತ್ಸಾ ಘಟಕಗಳ ಶುಭಾರಂಭ

ಮಂಗಳೂರು: ತುಳುನಾಡು ಎಜುಕೇಶನ್ ಟ್ರಸ್ಟ್ ಮಂಗಳೂರು ಇದರ ನೇತೃತ್ವದ ಸಮೂಹ ಸಂಸ್ಥೆಗಳಲ್ಲಿ ಒಂದಾದ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು 2016 ರಲ್ಲಿ ಸ್ಥಾಪಿಸಲಾಯಿತು.  ಸುಮಾರು ನೂರು ಹಾಸಿಗೆಗಳನ್ನೂಳಗೊಂಡ ಈ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯು  ಆದುನಿಕ ಸೌಲಭ್ಯಗಳನ್ನು ಹೊಂದಿದ್ದು, ಇದುವರೆಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಆರೋಗ್ಯವನ್ನರಸಿ ಬಂದವರ ನೋವಿಗೆ ಸ್ಪಂದಿಸಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಂ ಬಿ ಪುರಾಣಿಕ್ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂಭತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಶಾರದಾ ಆಸ್ಪತ್ರೆಯ ಸೇವಾ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ ನೂತನ ಮೂರು ಚಿಕಿತ್ಸಾ ವಿಭಾಗಗಳಾದ "ಗಮನ" "ಅಂಕುರ" ಹಾಗೂ "ನಿರ್ವಿಷ"ವನ್ನು ತೆರೆಯಲು ಯೋಚಿಸಲಾಗಿದ್ದು, ಈ ಚಿಕಿತ್ಸಾಘಟಕಗಳು ತಾ.24.10.2024 ರಂದು ಉದ್ಘಾಟನೆಗೊಳ್ಳಲಿವೆ.ಈ ಘಟಕಗಳನ್ನು ನಿಕಟಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ (317 D) ಡಾ. ಮೆಲ್ವಿನ್ ಡಿ.ಸೋಜಾ, ಜೈ ಹಿಂದ್ ಯೂ ಟ್ಯೂಬ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ರಾಹುಲ್ ಜೈನ್ ಹಾಗೂ ಹೊಸದಿಗಂತದ ವಿಶೇಷ ವರದಿಗಾರರಾದ ಶ್ರೀ ಗುರುವಪ್ಪ ಬಾಳೆಪುಣಿಯವರು ಉದ್ಘಾಟಿಸಲಿದ್ದಾರೆ ಎಂದರು.

ಬೆನ್ನು ಹುರಿ ಹಾಗೂ ಸಂಧು ಆರೋಗ್ಯ ವಿಭಾಗವಾದ "ಗಮನ'ದಲ್ಲಿ ಬೆನ್ನು ಮೂಳೆ ಸಮಸ್ಯೆ, ಮೂಳೆ ಸವೆತ, ಸ್ಕಿಪ್ ಡಿಸ್ಕ್ ಗಂಟುನೋವು, ಸ್ನಾಯುಗಳ ಸೆಳೆತ, ಸಯಾಟಿಕದಂತಹ ಸಮಸ್ಯೆಗಳಿಗೆ ಸೂಕ್ತ ನಿದಾನ ಮತ್ತು ಚಿಕಿತ್ಸೆಯು ಲಭ್ಯವಾಗಲಿದೆ. ಕ್ಯಾನ್ಸರ್ ಪೂರಕ ಚಿಕಿತ್ಸಾ ವಿಭಾಗವಾದ "ಅಂಕುರ" ದಲ್ಲಿ ಕ್ಯಾನ್ಸರ್‌ಗೆ ಪೂರಕ ಚಿಕಿತ್ಸೆ ಹಾಗೂ ಬೇರೆ ಚಿಕಿತ್ಸೆಯ ಅಡ್ಡ ಪರಿಣಾಮಗಳಿಂದ ಬಳಲುತ್ತಿರುವವರಿಗೆ ಸೂಕ್ತ ಪೂರಕ ಔಷಧ ಮತ್ತು ಆಹಾರ ಪದ್ಧತಿಯ ಸಲಹೆಗಳನ್ನು ನೀಡಲಾಗುವುದು.ವಿಷ ಚಿಕಿತ್ಸಾ ವಿಭಾಗವಾದ ನಿರ್ವಿಷ ದಲ್ಲಿ ಚರ್ಮದ ಅಲರ್ಜಿ, ತುರಿಕೆ, ಜೇಡ, ಜೇನು ನೊಣ ಇತ್ಯಾದಿ ಕೀಟಗಳ ಕಡಿತದಿಂದ ಉಂಟಾಗುವ ವಿಷಕ್ಕೆ ಹಾಗೂ ವಿಷ ಪೂರಿತ ಗಾಳಿ, ನೀರು ಹಾಗೂ ಆಹಾರ ಸೇವನೆಯಿಂದ ಉಂಟಾಗುವ ತೊಂದರೆಗಳಿಗೆ ಸೂಕ್ತ ಚಿಕಿತ್ಸೆಯು ಲಭ್ಯವಿದೆ. ದಿನಾಂಕ 24-10-2024 ರಿಂದ 30-10-2024 ರವರೆಗೆ ಪೂರ್ವಾಹ್ನ 9 ರಿಂದ ಮಧ್ಯಾಹ್ನ 3ರ ವರೆಗೆ ಬೆನ್ನುಹುರಿ ಹಾಗೂ ಸಂಧು ಆರೋಗ್ಯ ವಿಭಾಗ ಮತ್ತು ನಿರ್ವಿಷ ಚಿಕಿತ್ಸಾ ವಿಭಾಗದ ವತಿಯಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ನಡೆಯಲಿದ್ದು,  ಇದರೊಂದಿಗೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆಯನ್ನು 26/10/2024 ರಂದು ಹಮ್ಮಿಕೊಳ್ಳಲಾಗುವುದು.ಇದೇ ಸಂದರ್ಭದಲ್ಲಿ ತಾ|| 29/10/2024 ರಂದು ವಿಶೇಷ ಆಹಾರ ಮೇಳ ಮತ್ತು ಸ್ವಾಸ್ಥ್ಯ ರುಚಿ ಎಂಬ ಆರೋಗ್ಯಕರ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 8971153232, 7022485788 ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತುಳುನಾಡು ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಯಾದ ಪ್ರದೀಪ್ ಕಲ್ಕೂರ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜಿನ  ಸಂದೀಪ್ ಬೇಕಲ್, ಡಾಕ್ಟರ್ ಶ್ಯಾಮ್ ಪ್ರಸಾದ್ ಮತ್ತು ಹರ್ಷಿತ್ ಉಪಸ್ಥಿತರಿದ್ದರು

Category
ಕರಾವಳಿ ತರಂಗಿಣಿ