image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುರತ್ಕಲ್‌ನಲ್ಲಿ ‘ಮೀಡಿಯಾ ಮನಸುಗಳು’ ತಂಡದಿಂದ ಸ್ವಚ್ಛತಾ ಅಭಿಯಾನ: ಕಸದ ಕೊಂಪೆಯಾಗಿದ್ದ ಬಸ್ ನಿಲ್ದಾಣಗಳಿಗೆ ಮರುಜೀವ

ಸುರತ್ಕಲ್‌ನಲ್ಲಿ ‘ಮೀಡಿಯಾ ಮನಸುಗಳು’ ತಂಡದಿಂದ ಸ್ವಚ್ಛತಾ ಅಭಿಯಾನ: ಕಸದ ಕೊಂಪೆಯಾಗಿದ್ದ ಬಸ್ ನಿಲ್ದಾಣಗಳಿಗೆ ಮರುಜೀವ

ಸುರತ್ಕಲ್ : ದಕ್ಣಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕೆಲ ಸದಸ್ಯರ ‘ಮೀಡಿಯಾ ಮನಸುಗಳು’ ತಂಡದ ವತಿಯಿಂದ ಶನಿವಾರ ಮುಂಜಾನೆ ಸುರತ್ಕಲ್‌ನ ಕುಳಾಯಿ ಹೊನ್ನಕಟ್ಟೆ ಮತ್ತು ಹೊಸಬೆಟ್ಟು ಬಸ್ ನಿಲ್ದಾಣಗಳಲ್ಲಿ ಹಮ್ಮಿಕೊಳ್ಳಲಾದ ಶ್ರಮದಾನ ಯಶಸ್ವಿಯಾಗಿ ನೆರವೇರಿತು.

ನಿತ್ಯ ನೂರಾರು ಪ್ರಯಾಣಿಕರು ಬಳಸುವ ಈ ಬಸ್ ನಿಲ್ದಾಣಗಳು ಕಸದ ಕೊಂಪೆಯಾಗಿ ಅಸಹ್ಯಕರ ವಾತಾವರಣ ಹೊಂದಿದ್ದವು. ಈ ಕುರಿತು ಸಾರ್ವಜನಿಕರೊಬ್ಬರ ಮನವಿಗೆ ಸ್ಪಂದಿಸಿದ ಪತ್ರಕರ್ತರ ತಂಡ, ಶನಿವಾರ ಮುಂಜಾನೆ 6:30ರಿಂದ ನಿರಂತರ ಮೂರು ಗಂಟೆಗಳ ಕಾಲ ಶ್ರಮದಾನ ನಡೆಸಿತು. ನಿಲ್ದಾಣಗಳಲ್ಲಿ ಸಂಗ್ರಹವಾಗಿದ್ದ ಮೂಟೆಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ, ಗುಟ್ಕಾ ಪ್ಯಾಕೆಟ್ ಹಾಗೂ ಬಾಟಲಿಗಳನ್ನು ತೆರವುಗೊಳಿಸಿ ಮಹಾನಗರ ಪಾಲಿಕೆಯ ವಾಹನದ ಮೂಲಕ ವಿಲೇವಾರಿ ಮಾಡಲಾಯಿತು.

ಸುದ್ದಿ ವರದಿ ಮಾಡುವ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ತಾವು ಮುಂಚೂಣಿಯಲ್ಲಿದ್ದೇವೆ ಎಂಬುದನ್ನು ಪತ್ರಕರ್ತರು ಈ ಮೂಲಕ ಸಾಬೀತುಪಡಿಸಿದ್ದಾರೆ. ಈ ಅಭಿಯಾನದಲ್ಲಿ ಸ್ಥಳೀಯರಾದ ಸಂತೋಷ್ ಹೊಸಬೆಟ್ಟು ಹಾಗೂ ನವೀನ್ ದೇವಾಡಿಗ ಕೈಜೋಡಿಸಿದ್ದರು. ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ರಾಕೇಶ್ ಎಕ್ಕಾರ್, ಸಂದೇಶ್ ಶೆಟ್ಟಿ ಹಾಗೂ ಅನೂಪ್ ಸೂರಿಂಜೆ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Category
ಕರಾವಳಿ ತರಂಗಿಣಿ