image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ: ವಿವೇಕಾನಂದ ಪದವಿಪೂರ್ವ ಕಾಲೇಜು ಬಾಲಕರ ತಂಡಕ್ಕೆ ಪ್ರಥಮ ಸ್ಥಾನ

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ: ವಿವೇಕಾನಂದ ಪದವಿಪೂರ್ವ ಕಾಲೇಜು ಬಾಲಕರ ತಂಡಕ್ಕೆ ಪ್ರಥಮ ಸ್ಥಾನ

ಮಂಗಳೂರು : ಮುಲ್ಕಿಯ ಕೆಪಿಎಸ್ ಸ್ಕೂಲ್ ಪಂಜಿನಡ್ಕದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಮನ್ವಿತ್ (ರಿಥಮಿಕ್) ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸೃಜನ್ (ರಿಥಮಿಕ್) ಪ್ರಥಮ, ರಿತೇಶ್ ಹಾಗೂ ಯಜ್ಞ (ಆರ್ಟಿಸ್ಟಿಕ್) ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹಾಗೆಯೇ ಸ್ಕಂದ ಬಲ್ಲಕ್ಕುರಾಯ (ಟ್ರೇಡಿಷನಲ್) ಪ್ರಥಮ ಸ್ಥಾನ, ಮತ್ತು ಲೀಕ್ಷಿತ್ (ಟ್ರೇಡಿಷನಲ್) ದ್ವಿತೀಯ ಹಾಗೂ (ರಿಥಮಿಕ್) ನಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.

ಈ ವಿಜೇತ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಅವರ ನೇತೃತ್ವದಲ್ಲಿ ತರಬೇತಿ ಪಡೆದಿತ್ತು. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ