image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರಕಾರದಿಂದ ಅತಿಥಿ ಉಪನ್ಯಾಸಕರ ಕಡಿತ: ವಿದ್ಯಾರ್ಥಿಗಳ ವಿದ್ಯೆಗೇ ತುಳಿತ ?

ಸರಕಾರದಿಂದ ಅತಿಥಿ ಉಪನ್ಯಾಸಕರ ಕಡಿತ: ವಿದ್ಯಾರ್ಥಿಗಳ ವಿದ್ಯೆಗೇ ತುಳಿತ ?

ಮಂಗಳೂರು: ಎಂ ಎಸ್ ಡಬ್ಲ್ಯೂ ಎಂಬ ಸ್ನಾತಕೋತ್ತರ ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ 3 ಸ್ಪೆಷಲೈಜೇಶನ್ (Human resource, Medical Psychiatry, Community Development) ವಿಷಯಗಳಿದ್ದು, ಪ್ರತಿವರ್ಷ ವಿದ್ಯಾರ್ಥಿಗಳೇ ತಮ್ಮ ಸ್ಪೆಷಲೈಝಷನ್ ಆಯ್ದುಕೊಳ್ಳುವ ಅಧಿಕಾರವಿತ್ತು.  ನಾವು ನಮ್ಮ ಸ್ಪಷಲೈಸ್ ಡ್  ವಿಷಯದ ಆಧಾರದ ಮೇಲೆ  ಉದ್ಯೋಗವನ್ನು ಪಡೆದುಕೊಳ್ಳುತ್ತೇವೆ. ಆದರೆ ಮಂಗಳೂರು ವಿವಿ ವ್ಯಾಪ್ತಿಯ ಸರಕಾರಿ  ಎಮ ಎಸ್ ಡಬ್ಲ್ಯೂ ತರಗತಿಗಳಿರುವ ಕಾಲೇಜುಗಳಿಗೆ, ಜಂಟಿ ನಿರ್ದೇಶಕರು 15 ವಿದ್ಯಾರ್ಥಿಗಳು ಇದ್ದರೆ ಮಾತ್ರ ಸ್ಪೆಷಲೈಜೇಷನ್ ನೀಡುವಂತೆ ಹಾಗೂ ಯಾವುದೇ ಲಿಖಿತ ಪ್ರತಿ ಇಲ್ಲದೆ ವಿಡಿಯೋ ಕಾನ್ಸರೆನ್ಸ್ ಮೂಲಕ ಆದೇಶ ನೀಡಿರುತ್ತಾರೆ. ಈ ಆದೇಶವು ಕೇವಲ ಸರಕಾರಿ ಕಾಲೇಜುಗಳಿಗೆ ಮಾತ್ರ ಅನ್ವಯವಾಗುತ್ತದೆ. ಎಂದು ಎಮ್ ಎಸ್ ಡಬ್ಲೂ  ವಿದ್ಯಾರ್ಥಿನಿ ಸ್ವಾತಿ ತಮ್ಮ ಅಳಲು ತೋಡಿಕೊಂಡರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಎಮ್ ಎಸ್ ಡಬ್ಲ್ಯೂ ಎರಡನೇ ವರ್ಷದ ವಿದ್ಯಾರ್ಥಿನಿ. ನನಗೆ ಎಚ್ ಆರ್ ಆಗಬೇಕೆನ್ನುವ ಆಸೆ ಚಿಕ್ಕವಳಿಂದನೂ ಇತ್ತು. ಅದಕ್ಕಾಗಿ ಹಾಸನದಿಂದ ಬಂದು ವಿಟ್ಲದ ಕಾಲೇಜಿನಲ್ಲಿ ಓದುತ್ತಿದ್ದೇನೆ. ಈಗ ನಮ್ಮ ಕಾಲೇಜಿನಲ್ಲಿ ಎಚ್ ಆರ್ ಸ್ಪೆಷಲೈಜೆಷನ್ ಇಲ್ಲ. ಯಾವುದೇ ಸ್ಪೆಷಲೈಜೇಷನ್ ಮಾಡಬೇಕಾದರೆ ಕನಿಷ್ಟ ಹದಿನೈದು ವಿದ್ಯಾರ್ಥಿಗಳು ಇರಲೇ ಬೇಕು ಎನ್ನುತ್ತಿದ್ದಾರೆ.‌

ಆದರೆ ನಮ್ಮ ಕಾಲೇಜಿನಲ್ಲಿ ಇರುವ 30 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಮೆಡಿಕಲ್ ಸೈಕ್ಯಾಟ್ರಿ  ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಈಗಾಗಲೇ ತರಗತಿಗಳು ಪ್ರಾರಂಬ ಆಗಿದೆ. ಆದರೆ ಇನ್ನು ಉಳಿದ ನಾವು ಹತ್ತು ವಿದ್ಯಾರ್ಥಿಗಳು ಏನು ಮಾಡಬೇಕೆಂದು ತಿಳಿಯದೆ ಅತಂತ್ರ ಸ್ಥಿತಿಯಲ್ಲಿದ್ದೇವೆ. ಪ್ರಾಂಶುಪಾಲರನ್ನು ಕೇಳಿದರೆ ನೀವು ಮೆಡಿಕಲ್ ಸೈಕ್ಯಾಟ್ರಿ ಗೆ ಸೇರಿಕೊಳ್ಳಿ, ಇಲ್ಲವಾದರೆ ಖಾಸಗಿ ಶಾಲೆಗೆ ಸೇರಿಕೊಳ್ಳಿ ಎನ್ನುತ್ತಾರೆ. ಖಾಸಗಿ ಶಾಲೆಗೆ‌ ಸೇರುವಷ್ಟು ಸಿರಿವಂತರಲ್ಲ.  ಎಂದು ತನ್ನ ನೋವು ಹಂಚಿಕೊಂಡರು. ನಿಖಿಲ್ ಮಾತಾನಾಡಿ ಸರಕಾರದ ನಿಯಮದ ಪ್ರಕಾರ ಯಾವುದೇ ಕೋರ್ಸ್ ಅಥವಾ ಐಚ್ಚಿಕ ವಿಷಯಗಳಲ್ಲಿ 15 ವಿದ್ಯಾರ್ಥಿಗಳು ಇರಬೇಕು ಎನ್ನುವ ಯಾವುದೇ ನಿಯಮಗಳು ಇಲ್ಲ. ಆದರೆ ಸರಕಾರಿ ಕಾಲೇಜುಗಳಿಗೆ ಮಾತ್ರ ಯಾಕೆ ಈ ನಿಯಮ?. ಅತಿಥಿ ಉಪನ್ಯಾಸಕರನ್ನು ಕಡಿಮೆ ಮಾಡಲು ಈ ರೀತಿ ಮಾಡುತ್ತಿಸ್ಪಷಲೈ ಈ ಆದೇಶದಿಂದ ವಿದ್ಯಾರ್ಥಿಗಳಿಗೆ ತಮ್ಮ ಸ್ಪೆಷಲೈಜೇಷನ್ ಅನ್ನು ಆಯ್ಕೆ ಮಾಡಲು ಅವಕಾಶ ದೊರಕುತ್ತಿಲ್ಲ ಹಾಗೂ ಇದರಿಂದ ವಿದ್ಯಾರ್ಥಿಗಳಿಗೆ ಮುಂದೆ ಉದ್ಯೋಗಕ್ಕೂ ಸಮಸ್ಯೆಯಾಗುತ್ತದೆ. ಲಿಖಿತ ಪ್ರತಿ ಇಲ್ಲದೆ ಸರಕಾರಿ ಕಾಲೇಜುಗಳು ಹೇಗೆ ಈ ಆದೇಶವನ್ನು ಪಾಲಿಸುತ್ತಿದ್ದಾರೆ ಎಂಬ ಪ್ರಶ್ನೆ ಕೂಡ ಮೂಡುತ್ತದೆ. ದೂರು ನೀಡಿದರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಶಾಸಕ ಅಶೋಕ್ ರೈ, ಸಭಾಧ್ಯಕ್ಷರಾದ ಯುಟಿ ಖಾದರ್ ಅವರಲ್ಲೂ ಮನವಿ ನೀಡಿದ್ದೇವೆ. ಆದರೆ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ನಾಳೆ ಮಿನಿ ವಿಧಾನಸೌದ ದ ಮುಂದೆ ಮುಷ್ಕರ ಮಾಡಲು ಯೋಜಿಸಿದ್ದೇವೆ. ಆದರೆ ಮುಷ್ಕರ ಮಾಡಿದರೆ ಟಿ ಸಿ ಕೊಟ್ಟು‌ ಕಳಿಸುತ್ತೇವೆ ಅಂತ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಫೋನ್ ಬರುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿನಿಯರಾದ  ಮೋಕ್ಷತಾ, ಪ್ರವೀಣ ಮತ್ತು ದೀಕ್ಷಿತಾ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ