ಉಜಿರೆ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 25 ರ ಭಾನುವಾರದಂದು ವಿಶ್ವಶಾಂತಿಗಾಗಿ 'ಸಿದ್ಧನವಗ್ರಹ ತೀರ್ಥಂಕರರ ಮಹಾಆರಾಧನೆ' ಹಾಗೂ 'ಶ್ರೀ ಮುನಿಸುವ್ರತ ಭಗವಾನ್ ವಿಶೇಷ ಆರಾಧನೆ' ಆಯೋಜಿಸಲಾಗಿದೆ. ಈ ಧಾರ್ಮಿಕ ಸಮಾರಂಭದ ಆಮಂತ್ರಣ ಪತ್ರವನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬುಧವಾರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ 108 ಅನೇಕಾಂತ ಸಾಗರ ಮುನಿಮಹಾರಾಜರು ಹಾಗೂ ನಾಡಿನ ಸಮಸ್ತ ಜೈನ ಮಠಗಳ ಭಟ್ಟಾರಕರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಮುಖ ರಾಜಕೀಯ ನಾಯಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ತ್ಯಾಗಿ ಸೇವಾಸಮಿತಿ ಟ್ರಸ್ಟ್, ಚಕ್ರೇಶ್ವರಿ ಮಹಿಳಾ ಸಮಾಜ, ಕರ್ನಾಟಕ ಜೈನ್ ಅಸೋಸಿಯೇಶನ್, ಭಾರತೀಯ ಜೈನ್‌ಮಿಲನ್ (ವಲಯ-8) ಹಾಗೂ ಸಕಲ ದಿಗಂಬರ ಜೈನ ಸಮಾಜ ಬಾಂಧವರ ಜಂಟಿ ಆಶ್ರಯದಲ್ಲಿ ಈ ಮಹಾಆರಾಧನೆ ನಡೆಯಲಿದೆ.
ಆಮಂತ್ರಣ ಪತ್ರ ಬಿಡುಗಡೆ ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಭಾರತೀಯ ಜೈನ್‌ಮಿಲನ್ ಮಂಗಳೂರು ವಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್, ಎಂ. ಸುಭಾಶ್ಚಂದ್ರ ಜೈನ್, ಉಜಿರೆಯ ಬಿ. ಪ್ರಮೋದ್ ಕುಮಾರ್, ಬಿ. ಸೋಮಶೇಖರ ಶೆಟ್ಟಿ, ಬಿ. ಭುಜಬಲಿ, ಸನ್ಮತಿಕುಮಾರ್, ಸುಮನ್ ಕುಮಾರ್, ಜ್ಯೋತಿ ಕುಮಾರಿ, ಅರ್ಪಣಾ ಜೈನ್ ಮತ್ತು ವಿವೇಕ ಜೈನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.