image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಕೆನರಾ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ 50ನೇ ವಾರ್ಷಿಕ ಮಹಾಸಭೆ ಹಾಗೂ ಸ್ವರ್ಣ ಮಹೋತ್ಸವ ಸಮಿತಿ ಆಯ್ಕೆ

ಮಂಗಳೂರು ಕೆನರಾ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ 50ನೇ ವಾರ್ಷಿಕ ಮಹಾಸಭೆ ಹಾಗೂ ಸ್ವರ್ಣ ಮಹೋತ್ಸವ ಸಮಿತಿ ಆಯ್ಕೆ

ಮಂಗಳೂರು:  ಎಂ.ಜಿ. ರಸ್ತೆಯಲ್ಲಿರುವ ಪ್ರಸಿದ್ಧ ಕೆನರಾ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ (ರಿ) ವತಿಯಿಂದ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಸೆಪ್ಟೆಂಬರ್ 20, 2026ರ ಆದಿತ್ಯವಾರದಂದು 50ನೇ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿದೆ ಎಂದು ಕಮಿಟಿಯ ಅಧ್ಯಕ್ಷ ಎಂ.ಎಸ್. ಗುರುರಾಜ್ ಶೆಟ್ಟಿ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,

1977ರಲ್ಲಿ ಸ್ಥಾಪನೆಗೊಂಡು, 2021ರಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಈ ಸಂಸ್ಥೆಯ ಮೊದಲ ವಾರ್ಷಿಕ ಮಹಾಸಭೆಯು ಪ್ರೊಫೆಸರ್ ಜಿ.ಕೆ.ಶೆಣೈ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಂಘದ ಮೊದಲ ಅಧ್ಯಕ್ಷರಾದ ಅರ್ಕುಳ ಗೋವಿಂದ ಶೆಣೈ ಅವರ ಉಪಸ್ಥಿತಿಯಲ್ಲಿ ನಡೆದಿತ್ತು. ಇದೀಗ ತನ್ನ 50ನೇ ವಾರ್ಷಿಕ ಮಹಾಸಭೆಯ ಸಂಭ್ರಮದಲ್ಲಿದ್ದು, ಈ ಕಾರ್ಯಕ್ರಮವು ಪ್ರಸ್ತುತ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರೇಮಲತಾ ವಿ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಕಾಲೇಜಿನ ಸಂಚಾಲಕರಾದ ಸಿ.ಎ. ಜಗನ್ನಾಥ ಕಾಮತ್, ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್ ಹಾಗೂ ಮ್ಯಾನೇಜರ್ ಶಿವಾನಂದ ಶೆಣೈ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ ಎಂದರು.

ಈ ಮಹಾಸಭೆಯ ಕಾರ್ಯಕ್ರಮಗಳು ಬೆಳಿಗ್ಗೆ 9:30 ರಿಂದ 10:30 ರವರೆಗೆ ಲಘು ಉಪಹಾರದೊಂದಿಗೆ ಪ್ರಾರಂಭಗೊಂಡು, ಸರಿಯಾಗಿ 10:30ಕ್ಕೆ ಅಧಿಕೃತ ಸಭೆಯು ಆರಂಭವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಭಾಗವಾಗಿ 2025-26ನೇ ಸಾಲಿನ ಲೆಕ್ಕಪತ್ರ ಮಂಡನೆ, ನೂತನ ಲೆಕ್ಕಾಧಿಕಾರಿಯ ಆಯ್ಕೆ, ಸಂಘದ ನೂತನ ಸದಸ್ಯರ ಆಯ್ಕೆ ಹಾಗೂ ಮುಂಬರುವ "ಸ್ವರ್ಣ ಮಹೋತ್ಸವದ ನೂತನ ಸಮಿತಿ"ಯ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ. ಇದರೊಂದಿಗೆ ಸಂಘದ ಬೆಳವಣಿಗೆ ಹಾಗೂ ಇತರ ವಿಷಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನವೂ ನಡೆಯಲಿದ್ದು, ಆಜೀವ ಸದಸ್ಯತ್ವಕ್ಕೆ ₹1000 ಹಾಗೂ ಅರ್ಧಾವಧಿ ಸದಸ್ಯತ್ವಕ್ಕೆ ₹300 ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಆಡಳಿತ ಕಮಿಟಿಯಲ್ಲಿ ಅಧ್ಯಕ್ಷರಾಗಿ ಎಂ.ಎಸ್. ಗುರುರಾಜ್ ಶೆಟ್, ಉಪಾಧ್ಯಕ್ಷರಾಗಿ ವಿನೋದ್ ಕುಮಾರ್, ಕಾರ್ಯದರ್ಶಿಯಾಗಿ ಸಂತೋಷ್ ವಿ. ಪ್ರಭು, ಖಜಾಂಚಿಯಾಗಿ ರಾಘವೇಂದ್ರ ಶೆಟ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪದ್ಮಿನಿ ಕಾಮತ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಮಿಟಿಯ ಸದಸ್ಯರುಗಳಾಗಿ ಪ್ರವೀಣ್ ಪ್ರಭು, ಕಾರ್ತ್ಯಾಯಿನಿ ಕೆ., ಮಾಧವ ಸುವರ್ಣ, ರಾಕೇಶ್ ಕಾಮತ್, ಮಹಾಲಕ್ಷ್ಮಿ ಕೆ. ಪ್ರಭು, ಪವನ್ ಕುಮಾರ್, ವಿಕ್ರಮ್ ಕಾಮತ್, ಮುರಳೀಧರ್ ಕಾಮತ್ ಮತ್ತು ವೈಕುಂಠ ಶೆಣೈ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದರು. ಈ ಮಹಾಸಭೆಗೆ ಹಳೆಯ ವಿದ್ಯಾರ್ಥಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಸಂತೋಷ್ ವಿ. ಪ್ರಭು, ಖಜಾಂಚಿ ರಾಘವೇಂದ್ರ ಶೆಟ್ ಹಾಗೂ ಜೊತೆ ಕಾರ್ಯದರ್ಶಿ ಪದ್ಮಿನಿ ಕಾಮತ್, ಶ್ರೀಮತಿ ಕಾರ್ತ್ಯಾಯನಿ, ವಿನೋದ್ ಕುಮಾರ್  ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ