image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ವಿವಿ ಶೈಕ್ಷಣಿಕ ಮಂಡಳಿ ಸಭೆ ದಿನಾಂಕ ಮರುನಿಗದಿ

ಮಂಗಳೂರು ವಿವಿ ಶೈಕ್ಷಣಿಕ ಮಂಡಳಿ ಸಭೆ ದಿನಾಂಕ ಮರುನಿಗದಿ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2026-27ನೇ ಸಾಲಿನ ದ್ವಿತೀಯ ಸಾಮಾನ್ಯ ಸಭೆಯ ದಿನಾಂಕವನ್ನು ಮರುನಿಗದಿಪಡಿಸಲಾಗಿದೆ. ಈ ಹಿಂದೆ ಸೆಪ್ಟೆಂಬರ್ 17, 2026 ರಂದು ನಡೆಯಬೇಕಿದ್ದ ಈ ಸಭೆಯನ್ನು ಇದೀಗ ಸೆಪ್ಟೆಂಬರ್ 23, 2026 (ಬುಧವಾರ) ರಂದು ಪೂರ್ವಾಹ್ನ 11:00 ಗಂಟೆಗೆ ನಿಗದಿಪಡಿಸಲಾಗಿದೆ. ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಈ ಸಭೆಯು ನಡೆಯಲಿದೆ.

ಸಭೆಯ ಕಾರ್ಯಕಲಾಪಗಳನ್ನು ವರದಿ ಮಾಡಲು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದ್ದು, ಅವರ ಪ್ರಯಾಣಕ್ಕಾಗಿ ಸೆಪ್ಟೆಂಬರ್ 23ರಂದು ಪೂರ್ವಾಹ್ನ 10:00 ಗಂಟೆಗೆ ವುಡ್‌ಲ್ಯಾಂಡ್ಸ್ ಹೋಟೆಲ್ ಬಳಿ ವಾಹನ ಸೌಕರ್ಯವನ್ನು ಏರ್ಪಡಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ