image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಮನ್ಸ' ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ತುಳುನಾಡು ಮನ್ಸ ಸಮಾಜ ಸೇವಾ ಸಂಘ ಆಗ್ರಹ

'ಮನ್ಸ' ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ತುಳುನಾಡು ಮನ್ಸ ಸಮಾಜ ಸೇವಾ ಸಂಘ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕೇರಳದ ಕಾಸರಗೋಡು ಸೇರಿದಂತೆ 7 ಜಿಲ್ಲೆಗಳಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ 'ಮನ್ಸ' ಸಮುದಾಯದ ಹೆಸರನ್ನು ಸರ್ಕಾರದ ಪರಿಶಿಷ್ಟ ಜಾತಿಗಳ (SC) ಪಟ್ಟಿಗೆ ಸೇರ್ಪಡೆಗೊಳಿಸುವಂತೆ ತುಳುನಾಡು ಮನ್ಸ್ ಸಮಾಜ ಸೇವಾ ಸಂಘದ ಗೌರವ ಸಲಹೆಗಾರರಾದ ಅಚ್ಯುತ ಸಂಪಿಗೆ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸರಕಾರಕ್ಕೆ ಮನವಿ ಮಾಡಿದರು.

​ತಮ್ಮ ಮೂಲ ಜಾತಿಯ ಹೆಸರು ಸರ್ಕಾರದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಲ್ಲದಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 'ಆದಿದ್ರಾವಿಡ' ಹಾಗೂ ಮಲೆನಾಡು ಭಾಗಗಳಲ್ಲಿ 'ಆದಿಕರ್ನಾಟಕ' ಎಂಬ ನಕಲಿ ಜಾತಿ ಹೆಸರುಗಳಲ್ಲಿ ಪ್ರಮಾಣಪತ್ರ ಪಡೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು. ಇದರಿಂದಾಗಿ ಶೈಕ್ಷಣಿಕ, ಉದ್ಯೋಗಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಮುದಾಯವು ಶತಮಾನಗಳಿಂದ ಹಿಂದುಳಿದಿದೆ ಎಂದರು.

​'ಮನ್ಸ' ಜಾತಿಯ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಂಬಂಧಿಸಿದ ಕಡತ ಸಿದ್ಧವಾಗಿದ್ದರೂ, ಪ್ರಭಾವಿಗಳ ಒತ್ತಡದಿಂದಾಗಿ ಸಂಬಂಧಿಸಿದ ಇಲಾಖೆ ಸಚಿವರ ಅಂಕಿತ ಬೀಳದೆ ನನೆಗುದಿಗೆ ಬಿದ್ದಿದೆ ಎಂದು ಅವರು ಆರೋಪಿಸಿದರು. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಇಲಾಖಾ ಸಚಿವರು ಈ ವಿಷಯಕ್ಕೆ ಮೊದಲ ಆದ್ಯತೆ ನೀಡಬೇಕು ಮತ್ತು ಕುಲ ಶಾಸ್ತ್ರ ಅಧ್ಯಯನಕ್ಕೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು 'ಮನ್ಸ' ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ​ಎಂ ಶಾಂತರಾಮ್ - ಗೌರವ ಅಧ್ಯಕ್ಷರು, ವೆಂಕಣ್ಣ ಕೊಯ್ಯೂರು - ಅಧ್ಯಕ್ಷರು, ​ಹರಿಯಪ್ಪ ಮುತ್ತೂರು - ಉಪಾಧ್ಯಕ್ಷರು, ಉದಯ ಗೋಳಿಯಂಗಡಿ - ಪ್ರಧಾನ ಕಾರ್ಯದರ್ಶಿ, ​ಎಂ. ರಮೇಶ್ ಚೋಧಿ - ಸಂಘಟನಾ ಕಾರ್ಯದರ್ಶ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ