image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ: ಸೆ. 17 ರಂದು ಶಿಲಾನ್ಯಾಸ

ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ: ಸೆ. 17 ರಂದು ಶಿಲಾನ್ಯಾಸ

ಮಂಗಳೂರು: ಕರಾವಳಿ ಭಾಗದ ದೀರ್ಘಕಾಲದ ಬೇಡಿಕೆಯಾಗಿದ್ದ ಮಂಗಳೂರಿನ ಹಜ್ ಭವನ ನಿರ್ಮಾಣಕ್ಕೆ ಸೆಪ್ಟೆಂಬರ್ 17 ರಂದು ಶಿಲಾನ್ಯಾಸ ನೆರವೇರಲಿದೆ. ಮಂಗಳೂರು ತಾಲೂಕಿನ ಅಡ್ಕಬೆಟ್ಟದಲ್ಲಿ ಸುಮಾರು 1.55 ಎಕರೆ ಜಮೀನನ್ನು ಕೆಸಿಎಫ್ ಸಂಸ್ಥೆಯ ಹಾಜಿ ತಂಙಳ್ ರವರ ಜ್ಞಾಪಕಾರ್ಥ ದಾನವಾಗಿ ನೀಡಲಾಗಿದ್ದು, ಈ ಜಾಗದಲ್ಲಿ ನೂತನ ಹಜ್ ಭವನ ತಲೆಎತ್ತಲಿದೆ. ಇದು ಬಹು ಉದ್ದೇಶಿತ ಕಟ್ಟಡ ಸಂಕೀರ್ಣವಾಗಿದ್ದು, ಹಜ್ ಯಾತ್ರಿಕರ ತರಬೇತಿ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗೆ ನೆರವಾಗಲಿದೆ. ಇದರಲ್ಲಿ ಸಭಾಂಗಣ, 500ಕ್ಕೂ ಹೆಚ್ಚು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳಿರಲಿವೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಜಿಲಾನಿ ಮೊಖಾಸಿ,  ಸಿಇಒ, ಕರ್ನಾಟಕ ರಾಜ್ಯ ಹಜ್ ಸಮಿತಿ ಮಾಹಿತಿ ನೀಡಿದರು. 

ಹಿಂದೆ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆ ನಡೆಯುತ್ತಿತ್ತಾದರೂ, ನಂತರದ ದಿನಗಳಲ್ಲಿ ಬೆಂಗಳೂರಿನಿಂದ ಮಾತ್ರ ನಿರ್ಗಮನಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಕರಾವಳಿ ಮತ್ತು ಮಲೆನಾಡು ಭಾಗದ ಯಾತ್ರಿಕರಿಗೆ ತೀವ್ರ ತೊಂದರೆಯಾಗಿತ್ತು. ಇದೀಗ ಹಜ್ ಭವನ ನಿರ್ಮಾಣವು ಕರಾವಳಿಯ ಹಜ್ ಯಾತ್ರಿಕರಿಗೆ ದೊಡ್ಡ ಅನುಕೂಲವಾಗಲಿದೆ. ಸೆಪ್ಟೆಂಬರ್ 17 ರಂದು ಸಂಜೆ 4:30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ಮುಖಂಡರು, ಸಚಿವರು, ಸಂಸದರು, ಶಾಸಕರು ಹಾಗೂ ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಡಾ. ವೈ. ಎನೆಪೋಯ ಅಬ್ದುಲ್ಲಾ (ಅಧ್ಯಕ್ಷರು, ಹಜ್ ನಿರ್ವಹಣಾ ಸಮಿತಿ), ​ಕೆ. ಸೈಯದ್ ಅಶ್ರಫ್ (ರಾಜ್ಯ ಸಮಿತಿ ಸದಸ್ಯರು, ಹಜ್ ಸಮಿತಿ), ​ಸಿ. ಮಹಮೂದ್ ಹಾಜಿ (ಉಪಾಧ್ಯಕ್ಷರು, ಹಜ್ ನಿರ್ವಹಣಾ ಸಮಿತಿ), ​ಎಸ್.ಎಮ್. ರಶೀದ್ ಹಾಜಿ (ಉಪಾಧ್ಯಕ್ಷರು, ಹಜ್ ನಿರ್ವಹಣಾ ಸಮಿತಿ), ಹನೀಫ್ ಹಾಜಿ (ಜನರಲ್ ಸೆಕ್ರೆಟರಿ, ಹಜ್ ನಿರ್ವಹಣಾ ಸಮಿತಿ),ನಾಸಿರ್ ಲಕ್ಕಿ ಸ್ಟಾರ್ (ಸದಸ್ಯರು, ಹಜ್ ನಿರ್ವಹಣಾ ಸಮಿತಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ