ಮಂಗಳೂರು: ನಗರದ ಕದ್ರಿಯ ಅಲ್ವಾರೆಸ್ ರಸ್ತೆಯ ಪ್ರಶಾಂತ ವಾತಾವರಣದಲ್ಲಿ 'ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ ಮತ್ತು ಡೆವಲಪರ್ಸ್' ಸಂಸ್ಥೆಯಿಂದ ನಿರ್ಮಾಣಗೊಂಡಿರುವ ನೂತನ ವಸತಿ ಸಂಕೀರ್ಣ 'ಲಕ್ಷ್ಮೀ ಗೋವಿಂದ್' ಭಾನುವಾರ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು.
ನೂತನ ವಸತಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಬೆಂಗಳೂರು ಬಿಟ್ಟರೆ ಮಂಗಳೂರು ನಗರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ನಗರದ ಬೆಳವಣಿಗೆಯಲ್ಲಿ ಉದ್ಯಮಿಗಳ ಕೊಡುಗೆ ಅಪಾರವಾಗಿದೆ ಎಂದರು. ಮಂಗಳೂರು ಮಹಾನಗರ ಪಾಲಿಕೆಯು ಸಹ ಉದ್ಯಮಗಳಿಗೆ ಪೂರಕವಾದ ನಿಯಮಾವಳಿಗಳನ್ನು ಒದಗಿಸುತ್ತಿದೆ. ಲ್ಯಾಂಡ್ ಟ್ರೇಡ್ಸ್ ಮಾಲಕ ಶ್ರೀನಾಥ್ ಹೆಬ್ಬಾರ್ ಅವರು ಮಂಗಳೂರಿನ ವಿವಿಧ ಭಾಗಗಳಲ್ಲಿ ಗುಣಮಟ್ಟದ ವಾಣಿಜ್ಯ ಹಾಗೂ ವಸತಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಮೂಲಕ ಗ್ರಾಹಕರ ಸಂತೃಪ್ತಿಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಮಾಜಿ ಉಪಮೇಯರ್ ಲಾನ್ಸಿಲಾಟ್ ಪಿಂಟೊ, ಮಾಜಿ ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ಅಶೋಕ್ ಡಿ.ಕೆ. ಹಾಗೂ 'ಲಕ್ಷ್ಮಿ ಗೋವಿಂದ್' ವಸತಿ ಸಮುಚ್ಚಯದ ಭೂಮಾಲಕರಾದ ಸಿಎ ಸತೀಶ್ ಕಾಮತ್ ಮತ್ತು ವಿದ್ಯಾ ಕಾಮತ್ ಉಪಸ್ಥಿತರಿದ್ದರು. ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಮಾಲೀಕರಾದ ಕೆ. ಶ್ರೀನಾಥ್ ಹೆಬ್ಬಾರ್ ಅವರು ಅತಿಥಿ ಗಣ್ಯರನ್ನು ಸಮ್ಮಾನಿಸಿದರು. ಮಹೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು 27 ಸೆಂಟ್ಸ್ ಜಾಗದಲ್ಲಿ ಗ್ರೌಂಡ್ ಪ್ಲಸ್ 5 ಮಹಡಿಗಳಾಗಿ ನಿರ್ಮಾಣಗೊಂಡಿರುವ ಈ ಯೋಜನೆಯಲ್ಲಿ 25 ಅಪಾರ್ಟ್‌ಮೆಂಟ್‌ಗಳು (2 ಮತ್ತು 3 ಬಿಎಚ್‌ಕೆ) ಲಭ್ಯವಿವೆ. ಭೂಮಿ ಪೂಜೆಯೊಂದಿಗೆ ಆರಂಭಗೊಂಡ ಈ ಯೋಜನೆಯ ನಿರ್ಮಾಣ ಕಾರ್ಯವು ಕೇವಲ ಎರಡೇ ವರ್ಷಗಳಲ್ಲಿ ಪೂರ್ಣಗೊಂಡಿದೆ. ಸಂಪೂರ್ಣ ವಾಸ್ತು ಆಧಾರಿತವಾಗಿ ನಿರ್ಮಿಸಲಾದ ಈ ಕಟ್ಟಡದಲ್ಲಿ ಸುರಕ್ಷಿತ ಪಾರ್ಕಿಂಗ್, ಲಿಫ್ಟ್, ಮಹಡಿಯಲ್ಲಿ ಸುಸಜ್ಜಿತ ಸಮುದಾಯ ಭವನ, 24/7 ಸಿಸಿಟಿವಿ ಕಣ್ಗಾವಲು, ಇಂಟರ್‌ಕಾಮ್, ಶೇ. 100 ಡಿಜಿ ಪವರ್ ಬ್ಯಾಕಪ್, ಅಡುಗೆ ಅನಿಲ ಸಂಪರ್ಕ, ಸೋಲಾರ್ ಶಕ್ತಿ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆ ಸೇರಿದಂತೆ ಎಲ್ಲಾ ಆಧುನಿಕ ಸೌಕರ್ಯಗಳನ್ನು ಒದಗಿಸಲಾಗಿದೆ. ಶಾಲೆ-ಕಾಲೇಜುಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಮಾರುಕಟ್ಟೆಗಳು ಈ ಕಟ್ಟಡಕ್ಕೆ ತೀರಾ ಹತ್ತಿರದಲ್ಲಿವೆ.
1992 ರಲ್ಲಿ ಕೆ. ಶ್ರೀನಾಥ್ ಹೆಬ್ಬಾರ್ ಅವರಿಂದ ಆರಂಭಗೊಂಡ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು ಐಎಸ್‌ಒ ಮಾನ್ಯತೆ ಹಾಗೂ ಕ್ರಿಸಿಲ್ 'ಡಿಎ2' ರೇಟಿಂಗ್ ಪಡೆದುಕೊಂಡಿದೆ. ಇದುವರೆಗೆ 45 ಯಶಸ್ವಿ ಯೋಜನೆಗಳನ್ನು ಪೂರ್ಣಗೊಳಿಸಿರುವ ಸಂಸ್ಥೆಯ ಶಿವಬಾಗ್, ಎಕ್ಸ್‌ಪರ್ಟೈಸ್ ಎನ್‌ಕ್ಲೇವ್, ಪ್ರಿಸ್ಟಿನ್, ಬಿಎಂಕೆ ಸ್ಕೈ ವಿಲ್ಲಾ ಸೇರಿದಂತೆ ವಿವಿಧ ಯೋಜನೆಗಳು ಪ್ರಸ್ತುತ ನಗರದಲ್ಲಿ ಪ್ರಗತಿಯಲ್ಲಿವೆ.