ಮಂಗಳೂರು : ಮಂಗಳೂರು ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ಆಗಮನ (Domestic Arrival) ವಿಭಾಗದಲ್ಲಿ ಪ್ರಯಾಣಿಕರ ಆಕರ್ಷಣೆಗಾಗಿ 55*12 ಅಡಿ ಅಳತೆಯ ಅತ್ಯಾಧುನಿಕ ಕರ್ವ್ಡ್ (ವಕ್ರರೂಪಿ) ಡಿಜಿಟಲ್ ಸ್ಕ್ರೀನ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಈ ಹೊಸ ಡಿಜಿಟಲ್ ಪರದೆಯು ಕೇವಲ ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲದೆ, ಇಡೀ ಮಂಗಳೂರು ನಗರದಲ್ಲೇ ಅಳವಡಿಸಲಾದ ಅತ್ಯಂತ ದೊಡ್ಡ ಹಾಗೂ ಪ್ರಮುಖ ಮಾಧ್ಯಮ ಜಾಹೀರಾತು ಪರದೆಯಾಗಿದೆ (Iconic Media Option). ತನ್ನ ವಿಶಾಲ ಅಳತೆ ಮತ್ತು ವಿಶಿಷ್ಟ ಶೈಲಿಯ ವಕ್ರರೂಪಿ ವಿನ್ಯಾಸದಿಂದಾಗಿ ಇದು ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬರ ಗಮನ ಸೆಳೆಯುವಂತಿದೆ.
ಜಾಗತಿಕ ಮಟ್ಟದ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ 'ಆಪಲ್' (Apple) ತನ್ನ ಜಾಹೀರಾತು ಪ್ರಚಾರ ಪ್ರದರ್ಶನದ ಮೂಲಕ ಈ ಬೃಹತ್ ಸ್ಕ್ರೀನ್ ಉದ್ಘಾಟನೆಗೆ ಸಾಕ್ಷಿಯಾಯಿತು. ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಈ ಅತ್ಯಾಧುನಿಕ ಪರದೆಯು ಉನ್ನತ ಮಟ್ಟದ ದೃಶ್ಯಾನುಭವವನ್ನು ನೀಡಲಿದೆ.