image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡದ ಯುವಜನತೆಗೆ ವಿಕಸಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ (VBYLD) 2027 ರ ಆನ್‌ಲೈನ್ ರಸಪ್ರಶ್ನೆ ಅಭಿಯಾನಕ್ಕೆ ಚಾಲನೆ: ಉಲ್ಲಾಸ್

ದಕ್ಷಿಣ ಕನ್ನಡದ ಯುವಜನತೆಗೆ ವಿಕಸಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ (VBYLD) 2027 ರ ಆನ್‌ಲೈನ್ ರಸಪ್ರಶ್ನೆ ಅಭಿಯಾನಕ್ಕೆ ಚಾಲನೆ: ಉಲ್ಲಾಸ್

ಮಂಗಳೂರು: ಭಾರತದ ಭವಿಷ್ಯ ರೂಪಿಸಲು ದಕ್ಷಿಣ ಕನ್ನಡದ ಯುವಜನತೆಗೆ ಆಹ್ವಾನ ನೀಡಲಾಗಿದ್ದು, "ವಿಕಸಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ (VBYLD) 2027" ರೊಂದಿಗೆ ನೊಂದಣಿ ಆರಂಭಗೊಂಡಿದೆ. 'ಮೈ ಭಾರತ್' (MY Bharat) ಪೋರ್ಟಲ್‌ನಲ್ಲಿ ಜಿಲ್ಲಾ ಮಟ್ಟದ ಆನ್‌ಲೈನ್ ರಸಪ್ರಶ್ನೆ ಅಭಿಯಾನ ಆರಂಭಗೊಂಡಿದ್ದು, 15 ರಿಂದ 29 ವರ್ಷ ವಯಸ್ಸಿನ ಎಲ್ಲ ಯುವಜನರಿಂದ ಸಕ್ರಿಯ ಭಾಗವಹಿಸುವಿಕೆಗೆ ಮುಕ್ತ ಆಹ್ವಾನವಿದೆ ಎಂದು ಉಲ್ಲಾಸ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ಯುವಕರಿಗೂ ಅವಕಾಶ ಸಿಗುವಂತೆ ಮಾಡಲು, ವಿದ್ಯಾರ್ಥಿಗಳು, ಯುವ ವೃತ್ತಿಪರರು, ಉದ್ಯೋಗನಿರತ ಯುವಕರು, ಯುವಕ ಮಂಡಳಿಗಳು ಹಾಗೂ ಎಲ್ಲಾ ಸಮುದಾಯ ಸಂಘಟನೆಗಳು ಸೇರಿದಂತೆ ಜಿಲ್ಲೆಯ 15 ರಿಂದ 29 ವರ್ಷ ವಯಸ್ಸಿನ ಎಲ್ಲ ಯುವಜನರು ಮೈ ಭಾರತ್ ಪೋರ್ಟಲ್‌ನಲ್ಲಿ ಪ್ರಸ್ತುತ ಲೈವ್ ಇರುವ ಹಂತ-1 ರ ಆನ್‌ಲೈನ್ ಜಿಲ್ಲಾ ಮಟ್ಟದ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲು ಮುಕ್ತ ಆಹ್ವಾನ ನೀಡಲಾಗಿದೆ. VBYLD 2027 ಕಾರ್ಯಕ್ರಮವು ಸ್ಥಳಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ವಿಕಸಿತ್ ಭಾರತ್ ಚಾಲೆಂಜ್ ಟ್ರ್ಯಾಕ್ ಸೇರಿದಂತೆ ಆರು ಪ್ರಮುಖ ಕ್ಷೇತ್ರಗಳ (Tracks) ವೇದಿಕೆಯನ್ನು ಒದಗಿಸುತ್ತದೆ ಎಂದರು.

ಭಾಗವಹಿಸುವವರು 3 ಹಂತದ ಅರ್ಹತಾ ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ಸಾಗಲಿದ್ದು, ಹಂತ-1 ರಲ್ಲಿ (ಜಿಲ್ಲಾ ಮಟ್ಟದ ರಸಪ್ರಶ್ನೆ) ಮೈ ಭಾರತ್ ಪೋರ್ಟಲ್‌ನಲ್ಲಿ ಬಹುಭಾಷೆಗಳಲ್ಲಿ ನಡೆಸಲಾಗುವ ರಾಷ್ಟ್ರೀಯ ಮಟ್ಟದ ಆನ್‌ಲೈನ್ ರಸಪ್ರಶ್ನೆ ಇರುತ್ತದೆ. ಎಲ್ಲ ಶಿಕ್ಷಣ ಸಂಸ್ಥೆಗಳು, ಯುವಕ ಸಂಘಟನೆಗಳು ಹಾಗೂ ಯುವಕರಿಗೆ ಈ ಅವಕಾಶ ದೊರೆಯುತ್ತಿದ್ದು, ವಿದ್ಯಾರ್ಥಿಗಳು, ಎಲ್ಲಾ ಯುವಕರು, ಎಲ್ಲಾ ಯುವ ಸಂಘಟನೆಗಳು, ಕ್ರೀಡಾ ಸಂಘಟನೆಗಳು ಹಾಗೂ ಎಲ್ಲಾ ಅರ್ಹ ಯುವಕರು ಈ ಅಭಿಯಾನದಲ್ಲಿ ಪಾಲ್ಗೊಂಡು 'ವಿಕಸಿತ್ ಭಾರತ್' ನಿರ್ಮಾಣಕ್ಕೆ ತಮ್ಮ ಚಿಂತನೆಗಳನ್ನು ಕೊಡುಗೆಯಾಗಿ ನೀಡುವಂತೆ ಕೋರಲಾಗಿದೆ. 

Category
ಕರಾವಳಿ ತರಂಗಿಣಿ