ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ಪದವು ಸೆಂಟ್ರಲ್ ವಾರ್ಡಿನ ಕ್ಯಾಸ್ತಲಿನೊ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಯು 50 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು.
ಈ ವೇಳೆ ಮಾತನಾಡಿದ ಶಾಸಕರು, ಸ್ಥಳೀಯರ ಅನುಕೂಲಕ್ಕಾಗಿ ಈ ಭಾಗದಲ್ಲಿ ಮ್ಯಾನ್ ಹೋಲ್ ಸಹಿತ ರಸ್ತೆಯ ಅಭಿವೃದ್ಧಿಯಾಗಬೇಕು ಎಂದು ನಿಕಟಪೂರ್ವ ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿ ಅನೇಕ ಬಾರಿ ಮನವಿ ಮಾಡಿದ್ದರು. ಅದರಂತೆ ರಾಜ್ಯ ಸರ್ಕಾರ ನೀಡಿರುವ ಅತ್ಯಲ್ಪ ಅನುದಾನದಲ್ಲೇ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್ ಕೊಟ್ಟಾರಿ, ಏಳು ವರ್ಷಗಳ ಹಿಂದೆ ಶಕ್ತಿನಗರ ಭಾಗದಲ್ಲಿದ್ದ ಎಲ್ಲಾ ಮಣ್ಣಿನ ರಸ್ತೆಗಳು ಇಂದು ಕಾಂಕ್ರೀಟ್ ರಸ್ತೆಗಳಾಗಿ ಬದಲಾಗಿವೆ. ಈ ವಾರ್ಡಿನ ಕೊನೆಯ ಕಾಮಗಾರಿಯೂ ಇಂದು ನಡೆಯುತ್ತಿದ್ದು, ಇದಕ್ಕೆ ಶಾಸಕರೇ ಕಾರಣ ಎಂದು ಹೆಮ್ಮೆಯಿಂದ ನುಡಿದರು. ಅಲ್ಲದೆ, ಸ್ಥಳೀಯ ಸಮಸ್ತ ಜನತೆಯ ಪರವಾಗಿ ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ತೇಜಸ್ ಕೊಂಗೂರು, ಹರೀಶ್ ರೈ, ಅಶ್ವಿತ್ ಕೊಟ್ಟಾರಿ, ರವೀಂದ್ರ ಕುಚ್ಚಿಕಾಡ್, ಲ್ಯಾನ್ಸಿ, ಸತೀಶ್ ಕುಮಾರ್, ರಾಮ, ಪ್ರಕಾಶ್, ನವೀನ್, ವಾಸು ರಾಜೀವನಗರ, ಅರ್ಷಾದ್ ಪೋಪಿ, ನಾಗರಾಜ್ ನೀತಿನಗರ, ಜಿನ್ನಪ್ಪ ಮಹಾಕಾಳಿ, ಗ್ರೇಷನ್ ಕೊಂಗೂರು, ಸಾಗರ್, ಸಣ್ಣು, ಭಾಸ್ಕರ್ ಕಕ್ಕೆಬೆಟ್ಟು, ರಾಜೇಶ್, ಚಾರ್ಲಿ, ಜಯರಾಮ್, ಯಾದವ, ಲೋಕೇಶ್ ರಾಜೀವನಗರ್, ಗೋಪಾಲ್, ಹರೀಶ್ ಕೊಂಗೂರು ಸೇರಿದಂತೆ ವಾರ್ಡಿನ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.