image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎರಡನೇ ಮಹತ್ವದ ಸಭೆ: ಕಾನೂನುಬದ್ಧವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎರಡನೇ ಮಹತ್ವದ ಸಭೆ: ಕಾನೂನುಬದ್ಧವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಎರಡನೇ ಹಾಗೂ ಸಿಎಂ ನೇತೃತ್ವದಲ್ಲಿ ಮೊದಲ ಮಹತ್ವದ ಸಭೆಯು ನಗರದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಯಾವುದೇ ಅನುದಾನದಡಿ ಕೈಗೊಳ್ಳುವ ರಸ್ತೆ, ಚರಂಡಿ ಅಥವಾ ಇತ್ಯಾದಿ ಕಾಮಗಾರಿಗಳ ಸರಿಯಾದ ದಾಖಲಾತಿ ಮತ್ತು ವೀಡಿಯೊ ಚಿತ್ರೀಕರಣ ಕಡ್ಡಾಯವಾಗಿ ಇರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಚಿವರು ಅಥವಾ ಶಾಸಕರು ಹೇಳಿದರೂ ಸಹ ಕಾನೂನು ಚೌಕಟ್ಟಿಗೆ ಮೀರಿ ಯಾವುದೇ ಕೆಲಸ ಮಾಡಬೇಡಿ, ಕೇವಲ ನಿಯಮಾನುಸಾರ ಮಾತ್ರ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು ಹಾಗೂ ಜಿಬಿಎ ಉಪಾಧ್ಯಕ್ಷರಾದ ಕೃಷ್ಣ ಬೈರೇಗೌಡ, ಸಚಿವರಾದ ಕೆ.ಜೆ. ಜಾರ್ಜ್, ಬಿ.ಝಡ್. ಜಮೀರ್ ಅಹ್ಮದ್ ಖಾನ್, ರಾಜ್ಯಸಭಾ ಸದಸ್ಯರಾದ ಮನ್ಸೂರ್ ಅಲಿ ಖಾನ್, ಲಹರ್ ಸಿಂಗ್ ಸಿರೋಯಾ, ಬಿಡಿಎ ಅಧ್ಯಕ್ಷ ಹಾಗೂ ಶಾಸಕರಾದ ಎನ್.ಎ. ಹ್ಯಾರೀಶ್ ಸೇರಿದಂತೆ ಪ್ರಮುಖ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ವಿವಿಧ ನಗರಪಾಲಿಕೆಗಳ ಆಯುಕ್ತರು ಮತ್ತು ಜಿಬಿಎ ಪದನಿಮಿತ್ತ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ