ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಈ ವಿಜೇತ ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧ್ಯಾನೇಶ್ ಎಸ್, ರಿಥನ್ ಗೌಡ ಎಸ್, ಶ್ರೀಶಾಂತ್, ಮೋಹಿತ್ ಬಿ.ಕೆ, ಅಭಯ್, ಡಿ.ವಿ ದೈವಿಕ್ ದರ್ಶನ್, ಪವನ್ ಕುಮಾರ್ ಟಿ, ಲೋಕೇಶ್ ಕೆ.ಜಿ, ತಸ್ಯೆ ಪಿ ಗೌಡ, ಭುವನ್ ಗೌಡ ಜಿ.ಎನ್ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ವಂಶಿಕ್ ಸಿ.ಆರ್, ನಿಹಾನ್ ಶೆಟ್ಟಿ ವಿ.ಆರ್, ಉಜ್ವಲ್ ಮನೋಜ್ ತಾರಾ, ಚಿರಾಗ್ ಜಿ.ಯು, ಪವನ್ ವಿ.ವಿ, ಬಿ.ಜಿ ವಿಲಾಸ್, ಗಗನ್ ಸಿ.ಎನ್ ಮತ್ತು ಶ್ರೀಶಾಂತ್ ಎಸ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಅವರ ನೇತೃತ್ವದಲ್ಲಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಪಡೆದುಕೊಂಡಿತ್ತು. ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದ ತಂಡದ ಸದಸ್ಯರನ್ನು ಮತ್ತು ತರಬೇತುದಾರರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.