ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದೆ. 2024ರ ಸಾಲಿನ ಕವಿತೆ ವಿಭಾಗದ ಪುರಸ್ಕಾರಕ್ಕೆ ಯಶೋದ ಮೋಹನ್ ಅವರ “ತಡ್ಯ ಕಡಪುನಗ” ಕೃತಿ ಆಯ್ಕೆಯಾಗಿದ್ದು, ನಾಟಕ ಪುಸ್ತಕ ವಿಭಾಗದ ಪುರಸ್ಕಾರಕ್ಕೆ ಅಕ್ಷತಾ ರಾಜ್ ಪೆರ್ಲ ಅವರ “ಮಂದಾರ ಮಲಕ” ಕೃತಿ ಆಯ್ಕೆಯಾಗಿದೆ.
2025ನೇ ಸಾಲಿನ ಕಾದಂಬರಿ ವಿಭಾಗದ ಪುರಸ್ಕಾರಕ್ಕೆ ರೂಪಕಲಾ ಆಳ್ವ ಅವರ “ಪಮ್ಮಕ್ಕೆನ ಪೊರ್ಂಬಾಟ” ಕೃತಿಯು ಆಯ್ಕೆಯಾಗಿದ್ದರೆ, ಕವಿತೆ ವಿಭಾಗದ ಪುರಸ್ಕಾರಕ್ಕೆ ಅಶೋಕ ಎನ್ ಕಡೇಶಿವಾಲಯ ಅವರ “ಬದ್ಕ್ ಬಾಗ್ಯೊದ ಬೊಲ್ಪು” ಕೃತಿ ಭಾಜನವಾಗಿದೆ. ಈ ಪುರಸ್ಕಾರವು ತಲಾ ಇಪ್ಪತ್ತೈದು ಸಾವಿರ (₹25,000) ರೂಪಾಯಿಗಳ ಬಹುಮಾನ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 04 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ತಿಳಿಸಿದ್ದಾರೆ.