image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಸೆಪ್ಟೆಂಬರ್ 11 ರಂದು 'ವಿವೇಕ ವಿಜಯ' ವಿಶೇಷ ಉಪನ್ಯಾಸ: ಚಕ್ರವರ್ತಿ ಸೂಲಿಬೆಲೆ ಭಾಗಿ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಸೆಪ್ಟೆಂಬರ್ 11 ರಂದು 'ವಿವೇಕ ವಿಜಯ' ವಿಶೇಷ ಉಪನ್ಯಾಸ: ಚಕ್ರವರ್ತಿ ಸೂಲಿಬೆಲೆ ಭಾಗಿ

ಪುತ್ತೂರು: ಸ್ವಾಮಿ ವಿವೇಕಾನಂದರು 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನೀಡಿದ ಐತಿಹಾಸಿಕ ಭಾಷಣದ 133ನೇ ವರ್ಷಾಚರಣೆಯ ಅಂಗವಾಗಿ, ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವೈದೇಹಿ ಸಭಾಂಗಣದಲ್ಲಿ 2026ರ ಸೆಪ್ಟೆಂಬರ್ 11ರ ಶುಕ್ರವಾರದಂದು 'ವಿವೇಕ ವಿಜಯ' ಶೀರ್ಷಿಕೆಯಡಿ ಮೂರು ವಿಶೇಷ ಉಪನ್ಯಾಸ ಅವಧಿಗಳನ್ನು ಆಯೋಜಿಸಲಾಗಿದೆ. ಖ್ಯಾತ ವಾಗ್ಮಿ ಹಾಗೂ ಚಿಂತಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಈ ಕಾರ್ಯಕ್ರಮದ ಮೂರೂ ಅವಧಿಗಳಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮವು ಸೆಪ್ಟೆಂಬರ್ 11ರ ಬೆಳಗ್ಗೆ 9:15ಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ವಿಜಯನಾರಾಯಣ ಕೆ. ಎಂ. ಅವರಿಂದ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯ ನಂತರ ನಡೆಯುವ ಮೊದಲ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಚಕ್ರವರ್ತಿ ಸೂಲಿಬೆಲೆಯವರು “ಭಾರತೀಯತೆ ಮತ್ತು ಯುವ ಜನತೆ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಈ ಅವಧಿಯಲ್ಲಿ ಎಸ್. ಆರ್. ಕೆ. ಲ್ಯಾಡರ್ಸ್ ಮಾಲಕರಾದ ಶ್ರೀ ಕೇಶವ ಅಮೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ. ಅವರು ಉಪಸ್ಥಿತರಿರಲಿದ್ದಾರೆ.

ಬೆಳಗ್ಗೆ 11:45ಕ್ಕೆ ಆರಂಭವಾಗುವ ಎರಡನೇ ಅವಧಿಯು ಶಿಕ್ಷಕರು ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಮೀಸಲಾಗಿದ್ದು, “ವರ್ತಮಾನ ಶಿಕ್ಷಣ ಮತ್ತು ಭವಿಷ್ಯ ಭಾರತ” ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಶ್ರೀ ಗಂಗಾಧರ ರೈ ಪೆರ್ನೆ ವಿಶೇಷ ಅಭ್ಯಾಗತರಾಗಿ ಮತ್ತು ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ವತ್ಸಲಾ ರಾಜ್ಜಿ ಉಪಸ್ಥಿತರಿರಲಿದ್ದಾರೆ.

ಸಂಜೆ 4:30ಕ್ಕೆ ಆಸಕ್ತ ಸಾರ್ವಜನಿಕರಿಗಾಗಿ “ಯುವಜನತೆ ಮತ್ತು ವೈಚಾರಿಕ ಸವಾಲುಗಳು” ವಿಷಯದ ಕುರಿತು ಮೂರನೇ ಅವಧಿಯ ಉಪನ್ಯಾಸ ಹಾಗೂ ವಿಚಾರ ಸಂವಾದ ನಡೆಯಲಿದೆ. ಪುತ್ತೂರಿನ ಲಾಜಿಕ್ ಹೈವ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಶ್ರೀ ಪ್ರತೀಕ್ ಪೈ ಈ ಅವಧಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಚ್ಛಿಸುವವರು 81050 72386 ಅಥವಾ 89719 24424 ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ