image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಗರೀಕರಣದ ಸವಾಲಿಗೆ ಸೃಜನಶೀಲ ವಾಸ್ತುಶಿಲ್ಪಿಗಳ ಅಗತ್ಯ: ಪ್ರೊ. ಸುಧೀರ್ ಆಚಾರ್ಯ

ನಗರೀಕರಣದ ಸವಾಲಿಗೆ ಸೃಜನಶೀಲ ವಾಸ್ತುಶಿಲ್ಪಿಗಳ ಅಗತ್ಯ: ಪ್ರೊ. ಸುಧೀರ್ ಆಚಾರ್ಯ

ಮೂಡುಬಿದಿರೆ: ವೇಗವಾಗಿ ಬೆಳೆಯುತ್ತಿರುವ ನಗರೀಕರಣಕ್ಕೆ ಅನುಗುಣವಾಗಿ ಸುಸ್ಥಿರ, ಸುವ್ಯವಸ್ಥಿತ ಹಾಗೂ ಜನಸ್ನೇಹಿ ನಗರಗಳನ್ನು ರೂಪಿಸುವಲ್ಲಿ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ. ಸುಧೀರ್ ಆಚಾರ್ಯ ಹೇಳಿದರು.

ಇಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ನಾಟಾ’ (NATA) ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ನಾಟಾ ಪರೀಕ್ಷೆಯನ್ನು ಕೇವಲ ಶೈಕ್ಷಣಿಕ ಪ್ರವೇಶ ಪರೀಕ್ಷೆಯಾಗಿ ನೋಡದೆ, ವಿದ್ಯಾರ್ಥಿಗಳಲ್ಲಿ ವಿನ್ಯಾಸ ಚಿಂತನೆ ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವ ಅವಕಾಶವಾಗಿ ಪರಿಗಣಿಸಬೇಕು ಎಂದರು. ಭಾರತದಲ್ಲಿ ನಗರೀಕರಣ ವಿಸ್ತರಿಸುತ್ತಿದ್ದು, ವಸತಿ, ವಾಣಿಜ್ಯ ಹಾಗೂ ಪರಿಸರ ಸ್ನೇಹಿ ಮೂಲಸೌಕರ್ಯ ರೂಪಿಸಲು ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ ಹೊಂದಿರುವ ಯುವ ವಾಸ್ತುಶಿಲ್ಪಿಗಳ ಅಗತ್ಯವಿದೆ ಎಂದು ತಿಳಿಸಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಮಾತನಾಡಿ, ವಾಸ್ತುಶಿಲ್ಪ ಕ್ಷೇತ್ರವು ವಿಜ್ಞಾನ, ತಂತ್ರಜ್ಞಾನ, ಕಲೆ ಮತ್ತು ಸೃಜನಶೀಲತೆಯ ಸಮನ್ವಯವಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್, ನಗರ ಯೋಜನೆ, ಒಳಾಂಗಣ ವಿನ್ಯಾಸ, ಲ್ಯಾಂಡ್‌ಸ್ಕೇಪ್ ವಿನ್ಯಾಸ ಹಾಗೂ ಸ್ವಂತ ವಾಸ್ತುಶಿಲ್ಪ ಸಂಸ್ಥೆ ಆರಂಭಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ವೃತ್ತಿ ಅವಕಾಶಗಳಿವೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಂಜೀವ್ ಎನ್. ಕೊಪ್ಪರ್, ಕೃಷ್ಣ ಪ್ರಸಾದ್ ಕೆ. ಮತ್ತು ಸಾಯಿಕಿರಣ್ ರಾಯ್ಕರ್ ಉಪಯುಕ್ತ ಮಾಹಿತಿ ನೀಡಿದರು. ಸಂಸ್ಥೆಯ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ನಾಟಾ ವಿಭಾಗದ ಸಂಯೋಜಕಿ ರಮ್ಯಾ ರೈ ಪಿ.ಡಿ. ಹಾಗೂ ಮೈತ್ರಿ ಉಪಸ್ಥಿತರಿದ್ದರು. ವೇದಾವತಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ