ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಜೆಪ್ಪು ಬಪ್ಪಾಲ್ ತಾಂತಿನಗರ 2ನೇ ಮತ್ತು 3ನೇ ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ 40 ಲಕ್ಷ ರೂ. ವಿಶೇಷ ಅನುದಾನದಡಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸ್ಥಳೀಯ ನಿವಾಸಿಗಳು ಹಾಗೂ ಬಿಜೆಪಿ ಪ್ರಮುಖರು ಈ ಭಾಗದ ಅಭಿವೃದ್ಧಿಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಜನDಯ ಬೇಡಿಕೆಯಂತೆ ಅನುದಾನ ಒಟ್ಟುಗೂಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯ ಶೈಲೇಶ್ ಬಿ. ಶೆಟ್ಟಿ, ಪ್ರಮುಖರಾದ ಪುಷ್ಪರಾಜ್ ಶೆಟ್ಟಿ, ಲಲ್ಲೇಶ್, ಪ್ರಮೋದ್ ಕೊಟ್ಟಾರಿ, ರಾಜೇಂದ್ರ ಶೆಟ್ಟಿ, ಸೋಮಶೇಖರ್, ಭಾಸ್ಕರ್ ರಾವ್, ನಾರಾಯಣ ಕುಂದರ್, ಲೋಕೇಶ್, ಪ್ರಾಣೇಶ್, ತರುಣ್, ಪ್ರವೀಣ್ ಪಿ.ಆರ್., ಚಂದ್ರಶೇಖರ್ ಹಾಗೂ ಮಹಿಳಾ ಪ್ರಮುಖರಾದ ಲಲಿತಾ, ಪ್ರಿತಾ ಕಾಮತ್, ಪೂಜಾ, ಅರ್ಜನಾ ರೈ, ಸುಧಾಮ ಯು., ರತನ್, ವಿನೋದ್, ಮೋಹಿನಿ ಚಂದ್ರಕಾಂತ್, ನಂದಿನಿ, ಧೀರ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.