ಮಂಗಳೂರು: ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ವಾಣಿಜ್ಯ, ಕೈಗಾರಿಕಾ ಸಂಸ್ಥೆಗಳು ತಮ್ಮ ದೈನಂದಿನ ಆಡಳಿತ ಮತ್ತು ಮಾರಾಟ ವ್ಯವಹಾರದಲ್ಲಿ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಾದ ಸರಕು ಮತ್ತು ಸೇವಾ ತೆರಿಗೆ, ಆದಾಯ ತೆರಿಗೆ ಮತ್ತು ಇತರ ಸರ್ಕಾರಿ ನಿಯಮ ಮತ್ತು ನಿಬಂಧನೆಗಳಲ್ಲಿ ಕಂಡು ಬರುವ ನ್ಯೂನತೆ ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಕರಿಸುತ್ತಿದೆ ಎಂದು ಭಾರತ್ ಬೀಡಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾದ ಆನಂದ್. ಪೈ ಅವರು ಹೇಳಿದರು. ಅವರು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯು ತಾ.18.10.2024ರಂದು ನಗರದ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಆರ್ಥಿಕ ಮತ್ತು ಸಮುದಾಯ ಬೆಳವಣಿಗೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಸರಕು ಸಾರಿಗೆ, ವಿಮಾನಯಾನ. ರೈಲ್ವೆಯಾನ ಮತ್ತು ಬಂದರು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಅಶ್ವಾಸನೆ ನೀಡಿದರು. ಈ ಸಂಧರ್ಭದಲ್ಲಿ ರೋಟರಿ ಸಂಸ್ಥೆಯ ವಿವಿಧ ಜನಪರ ಸೇವಾ ಯೋಜನೆ ಮತ್ತು ಚಟುವಟಿಕೆಗಳ ಬಗ್ಗೆ HO ವ್ಯಕ್ತಪಡಿಸಿ, ಶ್ಲಾಘಿಸಿ ಸಂಸ್ಥೆಯ ಗೃಹ ವಾರ್ತಾಪತ್ರಿಕೆ "ಸೆಂಟೋರ್" ರನ್ನು ಬಿಡುಗಡೆಗೊಳಿಸಿದರು. ಅವರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದುದನ್ನು ಪರಿಗಣಿಸಿ ಅವರನ್ನು ರೋಟರಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ರೋಟರಿ ಸಂಸ್ಥೆಯ ಅಧ್ಯಕ್ಷ ಬ್ರಿಯನ್ ಪಿಂಟೋ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಸೀತಾರಾಮರವರು ವರದಿ ಮಂಡಿಸಿದರು. ಭಾರತ್ ಲಾಜಿಸ್ಟಿಕ್ಸ್ ಸಂಸ್ಥೆಯ ಅಡಳಿತ ನಿರ್ದೇಶಕರಾದ ಸತೀಶ್ ಪೈಯವರು ಅನಂದ್. ಪೈ ಯವರ ಪರಿಚಯ ಮತ್ತು ಸಾಧನೆಗಳ ವಿವರ ನೀಡಿದರು. ಕೆನರಾ ವರ್ಕ್ ಶಾಪ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರೇಮನಾಥ್ ಕುಡ್ಡು ರವರು ಆನಂದ್, ಪೈಯವರೊಂದಿಗೆ ಇರುವ ಕುಟುಂಬ ಆತ್ಮೀಯ ಸಂಭಂಧ ಮತ್ತು ಒಡನಾಟವನ್ನು ಸ್ಮರಿಸಿದರು. ರೋಟರಿ ಸಂಸ್ಥೆಯ ಮಾಜಿ ಗವರ್ನರಾದ ಡಾ/ ದೇವದಾಸ್ ರೈ ಯವರು ವಂದಿಸಿದರು. ವೇದಿಕೆಯಲ್ಲಿ ಲೆಕ್ಕ ಪರಿಶೋಧಕ ಯಸ್. ಯಸ್ ನಾಯಕ್, ಸಂಸ್ಥೆಯ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.