image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಖ್ಯಮಂತ್ರಿ ಪರಿಹಾರ ನಿಧಿ: 7 ಅರ್ಜಿದಾರರಿಗೆ ₹5.64 ಲಕ್ಷ ಪರಿಹಾರ ಧನ ಬಿಡುಗಡೆ

ಮುಖ್ಯಮಂತ್ರಿ ಪರಿಹಾರ ನಿಧಿ: 7 ಅರ್ಜಿದಾರರಿಗೆ ₹5.64 ಲಕ್ಷ ಪರಿಹಾರ ಧನ ಬಿಡುಗಡೆ

ಮಂಗಳೂರು : ವಿಧಾನ ಪರಿಷತ್‌ ಶಾಸಕ ಶ್ರೀ ಐವನ್‌ ಡಿʼಸೋಜಾ ಅವರ ಶಿಫಾರಸ್ಸಿನ ಮೇರೆಗೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 7 ಜನ ಅರ್ಜಿದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು ರೂ. 5,64,694 ಪರಿಹಾರ ಧನ ಬಿಡುಗಡೆಯಾಗಿದ್ದು, ನೇರವಾಗಿ ಅರ್ಜಿದಾರರ ಖಾತೆಗೆ ತಲುಪಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ವಿಧಾನ ಪರಿಷತ್‌ ಶಾಸಕರ ಕಛೇರಿಯಲ್ಲಿ ಪರಿಹಾರ ಧನದ ಬಿಡುಗಡೆ ಪತ್ರಗಳನ್ನು ಹಸ್ತಾಂತರಿಸಲಾಯಿತು.

ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಶ್ರೀ ನವೀನ್‌ ಕೋಟ್ಯಾನ್‌ ಬೋಳೂರು ಇವರಿಗೆ ರೂ. 2.00 ಲಕ್ಷ, ಶ್ರೀಮತಿ ಸಾಜಿಯಾ ಮಮ್ತಾಜ್‌ ಕಣ್ಣೂರು ಇವರಿಗೆ ರೂ. 1,92,770, ಶ್ರೀ ಉಮ್ಮರ್‌ ಫಾರೂಕ್‌ ಪುತ್ತೂರು ಇವರಿಗೆ ರೂ. 1,09,000 (ರೂ. 1,097,000/-), ಶ್ರೀಮತಿ ಹೇಮಲತಾ ಕಿನ್ನಿಗೋಳಿ ಇವರಿಗೆ ರೂ. 27,741, ಶ್ರೀಮತಿ ಜಮೀಲ ಕಣ್ಣೂರು ಇವರಿಗೆ ರೂ. 19,324, ಶ್ರೀ ಕೃತಿನ್‌ ಜಿ. ಶೆಟ್ಟಿ ಇವರಿಗೆ ರೂ. 8,262 ಹಾಗೂ ಶ್ರೀಮತಿ ಶಕೀನ ಭಾನು ಕಣ್ಣೂರು ಇವರಿಗೆ ರೂ. 6,897 ಪರಿಹಾರ ಧನ ಮಂಜೂರಾಗಿದೆ.

ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ್ ರಾವ್ ಹಾಗೂ ಸತೀಶ್ ಪೆಂಗಲ್, ಕಾಂಗ್ರೆಸ್ ಮುಖಂಡರಾದ ಮನುರಾಜ್ ಎಂ.ಪಿ., ಮೀನಾ ಟೆಲ್ಲಿಸ್, ಇಮ್ರಾನ್ ಎ.ಆರ್., ಹಬೀಬುಲ್ಲಾ ಕಣ್ಣೂರು ಹಾಗೂ ನಾರಾಯಣ ಕೊಟ್ಟ್ಯಾನ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ