image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರೊ. ಬಿ.ಎ. ವಿವೇಕ ರೈ ಅವರಿಗೆ ನಿಸರ್ಗ ಗೌರವ ಪುರಸ್ಕಾರ 2026

ಪ್ರೊ. ಬಿ.ಎ. ವಿವೇಕ ರೈ ಅವರಿಗೆ ನಿಸರ್ಗ ಗೌರವ ಪುರಸ್ಕಾರ 2026

ಮಂಗಳೂರು: ತುಳು ಭಾಷೆ, ಸಾಹಿತ್ಯ ಹಾಗೂ ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಅವರಿಗೆ 2026ರ ಸಾಲಿನ ಪ್ರತಿಷ್ಠಿತ 'ನಿಸರ್ಗ ಗೌರವ ಪುರಸ್ಕಾರ'ವನ್ನು ನೀಡಿ ಗೌರವಿಸಲು ಬಿ. ದಾಮೋದರ ನಿಸರ್ಗ ತುಳು ಪ್ರತಿಷ್ಠಾನ ಕುಡ್ಲ ತೀರ್ಮಾನಿಸಿದೆ ಎಂದು ಪ್ರತಿಷ್ಠಾನದ ಸ್ಥಾಪಕಾದ್ಯಕ್ಷರಾದ ಹೇಮಾ ದಾಮೋದರ್ ನಿಸರ್ಗ ತಿಳಿಸಿದರು. ಅವರು ನಗರದ. ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, 

ಆಗಸ್ಟ್ 30, 2026ರ ಆದಿತ್ಯವಾರ ಸಂಜೆ 3.30ಕ್ಕೆ ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಸರ್ವಮಂಗಳ ಸಭಾಂಗಣದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬಿ. ದಾಮೋದರ ನಿಸರ್ಗ ಸಂಸ್ಮರಣೆ-2 ಕಾರ್ಯಕ್ರಮ ನೆರವೇರಲಿದೆ ಎಂದರು.  ಕಂಕನಾಡಿ ಗರೋಡಿಯ ಅಧ್ಯಕ್ಷ ಕೆ. ಚಿತ್ತರಂಜನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ ಭಾಗವಹಿಸಲಿದ್ದಾರೆ. ಯಕ್ಷಗುರು ವಕಾಡಿ ರವಿ ಅಳೇವೂರಾಯ ನಿಸರ್ಗ ಸಂಸ್ಮರಣ ನುಡಿಗಳನ್ನಾಡಲಿದ್ದು, ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ದಯಾನಂದ ಕಟೀಲು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ದಿ. ಬೋಳೂರು ಡೋಗ್ರ ಪೂಜಾರಿ ಸಂಸ್ಥಾಪಿತ ಶ್ರೀ ಜಗದಂಬಾ ಯಕ್ಷಗಾನ ಮಂಡಲ, ಉರ್ವ ಮಾರಿಗುಡಿ ಬೋಳೂರು ತಂಡ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಸಂಯೋಜನೆಯಲ್ಲಿ 'ನರಕಾಸುರ ಮೋಕ್ಷ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ತುಳು ಸಂಘಟನೆ, ಯಕ್ಷಗಾನ ಕ್ಷೇತ್ರ ಹಾಗೂ ತುಳು ಸಂಸ್ಕೃತಿಗೆ ಸುಮಾರು ನಾಲ್ಕುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ ಬಿ. ದಾಮೋದರ ನಿಸರ್ಗ ಅವರ ಸ್ಮರಣಾರ್ಥ ಸ್ಥಾಪಿತವಾದ ಈ ಪ್ರತಿಷ್ಠಾನವು, ಪ್ರತಿ ವರ್ಷ ತುಳು ಭಾಷೆ-ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ ಎಂದು ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ  ರವಿ ಅಲೆವೂರಾಯ, ಹರಿಕೃಷ್ಣ ಪುನರೂರು, ಡಾ. ವಿನ್ಯಾಸ ನಿಸರ್ಗ ಮತ್ತು ಡಾ.ಮೇಘ ತ್ರಿದೇವ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ