ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜೂನ್‌ನಲ್ಲಿ ನಡೆದ ಕಂಪನಿ ಸೆಕ್ರೆಟರೀಸ್ (ಸಿ.ಎಸ್.) ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ. (382 ಅಂಕ) ಮತ್ತು ನಾಗನಾಥ್ (353 ಅಂಕ) ಸಿ.ಎಸ್. ಪ್ರೊಫೆಷನಲ್ ಪರೀಕ್ಷೆಯ ಗ್ರೂಪ್-1 ಹಾಗೂ ಗ್ರೂಪ್-2 ಪರೀಕ್ಷೆಗಳನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣಗೊಳಿಸಿ, ಕಂಪನಿ ಸೆಕ್ರೆಟರಿ ವೃತ್ತಿಗೆ ಅಗತ್ಯವಾದ ಅರ್ಹತೆ ಪಡೆದುಕೊಂಡಿದ್ದಾರೆ.
ಇದೇ ಪರೀಕ್ಷೆಯ ಗ್ರೂಪ್-1ರಲ್ಲಿ ಬಿ. ಸುಹಾಸ್ ರಾವ್ (248), ಪ್ರತೀಕ್ಷಾ (223), ನಿಶಿತಾ ಸಿ. ಶೆಟ್ಟಿ (200) ಹಾಗೂ ತಸ್ಮಯ್ ಎಂ. ಬಪ್ಪಣವರ್ (200) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮತ್ತೊಂದೆಡೆ, ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯ ಮಾಡ್ಯೂಲ್-1ರಲ್ಲಿ ಜೇನ್ ಡಿಸೋಜಾ (204) ಹಾಗೂ ವೀಣಾ ನಾಯಕ್ (202) ಉತ್ತೀರ್ಣರಾಗಿದ್ದರೆ, ಮಾಡ್ಯೂಲ್-2ರಲ್ಲಿ ದೀಕ್ಷಾ (166) ಸಾಧನೆ ಮಾಡಿದ್ದಾರೆ.
ಸಾಧಕ ವಿದ್ಯಾರ್ಥಿಗಳಲ್ಲಿ ಅನನ್ಯ ಕೆ.ಎ. ಅವರದ್ದು ವಿಶೇಷ ಮೈಲಿಗಲ್ಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಉಚಿತವಾಗಿ ಪೂರ್ಣಗೊಳಿಸಿರುವ ಅನನ್ಯ, 2023ರ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿದ ಪ್ರಥಮ ವಿದ್ಯಾರ್ಥಿನಿಯಾಗಿದ್ದರು. ಇದೀಗ ಸಿ.ಎಸ್. ಪ್ರೊಫೆಷನಲ್‌ನ ಎರಡೂ ಗ್ರೂಪ್‌ಗಳನ್ನು ಪ್ರಥಮ ಯತ್ನದಲ್ಲೇ ಪೂರ್ಣಗೊಳಿಸಿ ಅರ್ಹತೆ ಗಳಿಸಿದ್ದಾರೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಅಭಿನಂದಿಸಿದ್ದಾರೆ.